
ಬೆಂಗಳೂರು, ನ.23- ತೀವ್ರ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ್ಕುಮಾರ್ ಅವರ ವೈಕುಂಠ ಸಮಾರಾಧನೆಯನ್ನು ನಾಳೆ (ನ.24) ನಗರದ ಪಂಪ ಮಹಾಕವಿ ರಸ್ತೆಯಲ್ಲಿರುವ ಉತ್ತರಾದಿಮಠದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಆಯೋಜಿಸಲಾಗಿದೆ.
ನಾಳೆ ಬೆಳಗ್ಗೆ 11 ಗಂಟೆಗೆ ಶ್ರದ್ಧಾಂಜಲಿ ಸಭೆ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಪ್ರಸಾದ ಆಯೋಜಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವೈಕುಂಠ ಸಮಾರಾಧನೆಯಲ್ಲಿ ವಿವಿಧ ಕ್ಷೇತ್ರದ ಪ್ರಮುಖರು, ಕುಟುಂಬ ವರ್ಗದವರು ಹಾಗೂ ಅನಂತ್ಕುಮಾರ್ ಅವರ ಒಡನಾಡಿಗಳು ಭಾಗವಹಿಸಲಿದ್ದಾರೆ.