ಬೆಂಗಳೂರು,ನ.22-ಈರುಳ್ಳಿ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರ ನೆರವಿಗೆ ತಕ್ಷಣವೇ ಧಾವಿಸಿ ಸೂಕ್ತ ಬೆಲೆ ಒದಗಿಸಬೇಕೆಂದು ಬಾಗಲಕೋಟೆ ಜಿಲ್ಲೆಯ ರೈತನೊಬ್ಬ ಪ್ರಧಾನಿ ನರೇಂದ್ರ ಮೋದಿಗೆ ಟ್ವಿಟ್ ಮೂಲಕ ಮನವಿ ಮಾಡಿದ್ದಾರೆ.
ಜಿಲ್ಲೆಯ ಬನಹಟ್ಟಿ ಗ್ರಾಮದ ಆನಂದ್ ಎಂಬುವ ರೈತರು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟರ್ ಹಾಗೂ ಪ್ರಧಾನಿ ಕಾರ್ಯಾಲಯಕ್ಕೂ ಟ್ವಿಟ್ ಮಾಡಿ ಈರುಳ್ಳಿ ಬೆಳೆಯಿಂದ ರೈತ ಎದುರಿಸುತ್ತಿರುವ ಸಂಕಷ್ಟವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.
ಉತ್ತರ ಕರ್ನಾಟಕದ ಭಾಗಗಳಲ್ಲಿ ರೈತರು ಈರುಳ್ಳಿಯನ್ನು ವಾಣಿಜ್ಯ ಬೆಳೆಯನ್ನಾಗಿ ಬೆಳೆಯುತ್ತಾರೆ. ಪ್ರತಿ ವರ್ಷ ಕ್ವಿಂಟಾಲ್ಗೆ 1800ರಿಂದ 2000ಕ್ಕೂ ಅಧಿಕ ಬೆಲೆ ಸಿಗುತ್ತಿತ್ತು. ಈ ಬಾರಿ ಕ್ವಿಂಟಾಲ್ಗೆ 250ರಿಂದ 300 ರೂ.ಕೂ ಸಿಗುತ್ತಿಲ್ಲ.
ಕಡೇ ಪಕ್ಷ ರೈತರು ಈ ಬೆಲೆಗೆ ಕೊಡಲು ಸಿದ್ದರಿದ್ದರೂ ಮಾರುಕಟ್ಟೆಯಲ್ಲಿ ಯಾರೊಬ್ಬರೂ ಖರೀದಿ ಮಾಡಲು ಮುಂದೆ ಬರುತ್ತಿಲ್ಲ. ಇದರಿಂದ ಬೆಳೆ ಬೆಳೆದ ರೈತ ದಿಕ್ಕು ಕಾಣದಂತಾಗಿದ್ದಾನೆ.
ಒಂದೆಡೆ ಬೆಲೆ ಕುಸಿತ, ಇನ್ನೊಂದೆಡೆ ಬೆಳೆದ ಬೆಲೆ ಮಾರಾಟವಾಗುತ್ತಿಲ್ಲ ಎಂಬುದು ರೈತನ ನೋವು.ಸಾಲಸೋಲ ಮಾಡಿ ಬೆಳೆ ಬೆಳೆದಿದ್ದ ರೈತರು ಈಗ ಏನು ಮಾಡಬೇಕೆಂದು ರೈತ ಆನಂದ್ ಪ್ರಶ್ನೆ ಮಾಡಿದ್ದಾರೆ.
ತಕ್ಷಣವೇ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ವಿಂಟಾಲ್ಗೆ 2000 ರೂ. ನಿಗದಿಪಡಿಸಬೇಕು,ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಮೊಬೈಲ್ ಆಪ್ ಅಳವಡಿಸುವುದು ಸೇರಿದಂತೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಪ್ರಧಾನಿ ಮುಂದಾಗಬೇಕೆಂದು ಟ್ವಿಟರ್ನಲ್ಲಿ ಮನವಿ ಮಾಡಲಾಗಿದೆ.
ಸ