ಕೋಲ್ಕತ್ತಾ: ಟೀಂ ಇಂಡಿಯಾದ ವೇಗಿ ಮೊಹ್ಮದ್ ಶಮಿ ಬಿಸಿಸಿಐ ನೀಡಿದ್ದ ಸಲಹೆಯನ್ನ ದಿಕ್ಕರಿಸಿದ್ದಾರೆ.
ಮುಂಬರುವ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿರುವ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ 15ಕ್ಕಿಂತ ಹೆಚ್ಚು ಓವರ್‍ಗಳನ್ನ ಹಾಕಬಾರದೆಂದು ಮೊಹ್ಮದ್ ಶಮಿ ಮತ್ತು ಆಫ್ ಸ್ಪಿನ್ನರ್ ಆರ್. ಅಶ್ವಿನ್‍ಗೆ ಷರತ್ತು ವಿಧಿಸಿತ್ತು. ಪಶ್ಚಿಮ ಬಂಗಾಳ ಪರ ಆಡುತ್ತಿರುವ ಮೊಹ್ಮದ್ ಶಮಿ ಕೇರಳ ವಿರುದ್ಧದ ಪಂದ್ಯದಲ್ಲಿ 26 ಓವರ್ ಬೌಲಿಂಗ್ ಮಾಡಿ ಎಲ್ಲರನ್ನು ಅಚ್ಚರಿ ಪಡಿಸಿದ್ದಾರೆ. ತಮ್ಮನ್ನ ತಾವು ಸಮರ್ಥಿಸಿಕೊಂಡಿರುವ ಶಮಿ ಎಲ್ಲೋ ಒಂದು ಕಡೆ ಅಭ್ಯಾಸ ಮಾಡುವ ಬದಲು ನೀವು ಆಡುವ ತಂಡಕ್ಕೆ ಲಾಭವಾಗಲಿದೆ. ಇಲ್ಲಿ ಹೆಚ್ಚು ಪಂದ್ಯಗಳನ್ನ ಆಡಿದ್ರೆ ಆಸ್ಟ್ರೇಲಿಯಾದಲ್ಲಿ ನೆರವಾಗುತ್ತೆ. ಪಂದ್ಯದಲ್ಲಿ ಆಡೋದೇ ನನಗೆ ತಯಾರಿ ಆಗಿದೆ ಎಂದಿದ್ದಾರೆ.
ಡಿ.6ರಿಂದ ಆಸ್ಟ್ರೇಲಿಯಾ ವಿರುದ್ದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಲಿದೆ.