
ಬೆಳಗಾವಿ: ಮುಂಬೈ ವಿರುದ್ಧದ ರಣಜಿ ಟೂರ್ನಿಯ ಲೀಗ್ ಹಂತದಲ್ಲಿ ಕರ್ನಾmಕ ತಂಡ 276 ರನ್‍ಗಳ ಭಾರಿ ಬೃಹತ್ ಮುನ್ನಡೆ ಪಡೆದು ಪಂದ್ಯ ಮೇಲೆ ಹಿಡಿತ ಸಾಧಿಸಿದೆ.
ಎರಡನೇ ಇನ್ನಿಂಗ್ಸ್‍ನ ಮೂರನೆ ದಿನದಾಟದ ಪಂದ್ಯದಲ್ಲಿ ವಿನಯ್ ಪಡೆ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದೆ. ಇದಕ್ಕು ಮುನ್ನ ಬ್ಯಾಟಿಂಗ್ ಮುಂದುವರೆಸಿದ ಮುಂಬೈ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ 205 ರನ್‍ಗಳಿಗೆ ಆಲೌಟ್ ಆಯಿತು. ಇದರ ಫಲವೇ ಕರ್ನಾಟಕ ತಂಡ 195 ರನ್‍ಗಳ ಮುನ್ನಡೆ ಪಡೆಯಿತು. ನಾಲಕ್ನೆ ದಿನ ಕೊನೆಯ ದಿನವಾಗಿದ್ದು ಪಂದ್ಯ ರೋಚಕ ಘಟ್ಟ ತಲುಪಿದೆ.