ನಗರದ ಕೆಲವು ಉಪವಿಭಾಗಗಳಲ್ಲಿ ನಾಳೆ ನೀರಿನ ಅದಾಲತ್ ನಡೆಸಲಿರುವ ಜಲಮಂಡಳಿ

ಬೆಂಗಳೂರು, ನ.21- ಜಲಮಂಡಲಿಯ ಸಕಾನಿಅ(ಕೇಂದ್ರ-3) ಮತ್ತು ಸಕಾನಿಅ(ಈಶಾನ್ಯ-3) ಉಪವಿಭಾಗಗಳಲ್ಲಿ ನಾಳೆ ಬೆಳಗ್ಗೆ 9.30ರಿಂದ 11ರವರೆಗೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ನೀರಿನ ಅದಾಲತ್ ನಡೆಸಲಾಗುತ್ತದೆ.

ನಾಳೆ ಫ್ರೇಜರ್‍ಟೌನ್, ಮಚಲಿ ಬೆಟ್ಟ, ಪಿಳ್ಳಣ್ಣ ಗಾರ್ಡನ್, ಡಿ.ಜೆ.ಹಳ್ಳಿ ಸೇವಾಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು ನೇತಾಜಿ ರಸ್ತೆ, ಫ್ರೇಜರ್ ಟೌನ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಕೇಂದ್ರ-3) ಉಪವಿಭಾಗ ಕಚೇರಿಯಲ್ಲಿ ಪರಿಶೀಲಿಸಿ ಬಗೆಹರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಕಾರ್ಯನಿರ್ವಾಹಕ ಅಭಿಯಂತರರು- 22945187, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು- 22945167ಅನ್ನು ಸಂಪರ್ಕಿಸಬಹುದು.

ಈಶಾನ್ಯ-3 ಉಪವಿಭಾಗದ ವ್ಯಾಪ್ತಿಗೆ ಬರುವ ಆರ್.ಟಿ.ನಗರ, ಕಾವಲ್ ಭೆರಸಂದ್ರ, ಸಂಜಯನಗರ, ಬಿ.ಇ.ಎಲ್ ರಸ್ತೆ, ಸೇವಾಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು 3ನೇ ಅಡ್ಡರಸ್ತೆ, ಪಿಟಿ ಕಾಲೋನಿ, ಆರ್.ಟಿ.ನಗರ ಇಲ್ಲಿ ನಡೆಸಲಿದ್ದು ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಕಾರ್ಯನಿರ್ವಾಹಕ ಅಭಿಯಂತರರು (ಈಶಾನ್ಯ)- 22945124 ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಉಪವಿಭಾಗ- 22945139 ಅನ್ನು ಸಂಪರ್ಕಿಸಬಹುದು.

ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಲಿಯ 24/7 ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ:22238888, ಸಹಾಯವಾಣಿ 1916 ಹಾಗೂ ವಾಟ್ಸ್‍ಆಪ್ ಸಂಖ್ಯೆ:8762228888 ಗೆ ಸಂಪರ್ಕಿಸಬಹುದಾಗಿದೆ ಎಂದು ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ