ಬೆಂಗಳೂರು,ನ.17- ಮುಂದಿನ ವರ್ಷದ ಜನವರಿ 4ರಂದು ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಬಿಡುಗಡೆ ಮಾಡಿರುವ ವೆಬ್ಸೈಟ್ನಲ್ಲಿ ಅಕ್ಷರಗಳನ್ನು ತಪ್ಪಾಗಿ ಮುದ್ರಿಸಿ ಅಪಹಾಸ್ಯಕ್ಕೆ ಗುರಿಯಾಗಿದೆ.
ಸಮ್ಮೇಳನದ ವೆಬ್ಸೈಟ್ ಡಿಡಿಡಿ.Zಚಿhoobಡಿb.ಟ್ಟಜ ತೆರೆದರೆ ಕನ್ನಡ ಅಕ್ಷರಗಳನ್ನು ತಪ್ಪಾಗಿ ಮುದ್ರಿಸಿ ಸಾಹಿತ್ಯ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಹಿತ್ಯ ಸಮ್ಮೇಳನ ಬಿಡುಗಡೆ ಮಾಡಿರುವ ವೆಬ್ಸೈಟ್ನಲ್ಲಿ ಪ್ರಾರಂಭದಲ್ಲಿ ಕನ್ನಡ ಸಾಹಿತಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರು ನಂತರ ಧಾರವಾಡದ ಕೈಲಾಸ ಮಂಟಪ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೃಷಿ ವಿಶ್ವವಿದ್ಯಾನಿಲಯ, ಕರ್ನಾಟಕ ವಿವಿ, ಇಸ್ಕಾನ್, ಜನಪದ ವಿವಿ, ಕರ್ನಾಟಕ ಹೈಕೋರ್ಟ್ ಪೀಠ ಸೇರಿದಂತೆ ನಾಡುನುಡಿ ಬಗ್ಗೆ ಸಾರುವ ಐತಿಹಾಸಿಕ ತಾಣಗಳನ್ನು ಪರಿಚಯಿಸಲಾಗಿದೆ.
ಮುಖಪುಟದಲ್ಲೇ ಇದುವೇ ನಮ್ಮ ಧಾರವಾಡ ಸೊಗಡು ಎಂಬುದನ್ನು ಸೋಗಡು ಎಂದು ತಪ್ಪಾಗಿ ಮುದ್ರಿಸಲಾಗಿದೆ. ಇನ್ನು ಕನ್ನಡ ಸಾಹಿತ್ಯ 19ನೇ ಶತಮಾನದ ಕೊನೆಗೆ ಹಾಗೂ 20ನೇ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು ಎಂಬಲ್ಲಿ ಹಾಗೂ ಬದಲಿಗೆ ಹಗು ಎಂದು ಪ್ರಕಟಿಸುವ ಮೂಲಕ ಪ್ರಮಾದಗಳ ಸರಮಾಲೆಯನ್ನೇ ಮುಂದುವರೆಸಿದೆ.
ಇನ್ನು ರಾಜ್ಯದ ಹೆಸರು ಕರ್ನಾಟಕದ ಹೆಸರನ್ನೇ ತಪ್ಪಾಗಿ ಅಂದರೆ ಕನಾಠಕ ಎಂದು ನಮೂದಿಸಲಾಗಿದೆ. ಪುನರ್ಮುದ್ರಣ ಎಂಬ ಪದವನ್ನೂ ಕೂಡ ಪುನರ್ದಣ ಎಂದು ತಪ್ಪಾಗಿ ಪ್ರಕಟಿಸಲಾಗಿದೆ.