ಬೆಂಗಳೂರು, ನ.17- ದೇಶದ ಎರಡನೆ ಅತಿ ದೊಡ್ಡ ಮ್ಯೂಚುಯಲ್ ಫಂಡ್ ಸಂಸ್ಥೆಯಾಗಿರುವ ಪಿಪಿಎಫ್ಎಎಸ್ ಸಂಸ್ಥೆಯು ಬೆಂಗಳೂರಿನಲ್ಲಿ ತನ್ನ ಶಾಖೆಯನ್ನು ಆರಂಭಿಸಿದೆ.
ಇಡೀ ದೇಶದಲ್ಲೇ ಬೆಂಗಳೂರು ಒಂದು ಪ್ರಮುಖ ಮಾರುಕಟ್ಟೆಯಾಗಿದ್ದು , ಇಲ್ಲಿನ ಗ್ರಾಹಕರು ಮತ್ತು ಪಾಲುದಾರರೊಂದಿಗೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಸಂಸ್ಥೆಯ ಶಾಖೆಯನ್ನು ಆರಂಭಿಸುತ್ತಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಇದರ ಅಧ್ಯಕ್ಷ ಹಾಗೂ ಸಿಇಒ ನೀಲ್ ಪರಾಗ್ ಫರಿಕ್ ತಿಳಿಸಿದರು.
ಹೂಡಿಕೆ ಮಾಡಲು ಸಾಕಷ್ಟು ಅವಕಾಶಗಳಿದೆ. ನಮ್ಮ ಸಂಸ್ಥೆ ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸಿ ಎಲ್ಲಾ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಅದಲ್ಲದೆ ಮ್ಯೂಚುಯಲ್ ಫಂಡ್ ಮಾರುಕಟ್ಟೆಯಲ್ಲೂ ವಿಶ್ವಾಸ ಮೂಡಿಸಿದೆ ಎಂದು ಹೇಳಿದರು.
ಇದೇ ತಿಂಗಳು ಚೆನ್ನೈನಲ್ಲಿ , ಡಿಸೆಂಬರ್ ತಿಂಗಳು ಮುಂಬೈನಲ್ಲಿ ಸಭೆಗಳು ನಡೆಯಲಿದ್ದು , ಐದು ವರ್ಷಗಳಲ್ಲಿ ಹೊಸ ಲಯದಲ್ಲಿ ಸಂಸ್ಥೆ ಹೊಸ ಗುರಿಯತ್ತ ಸಾಗುತ್ತಿದೆ ಎಂದು ಅವರು ಹೇಳಿದರು.