ಬೆಂಗಳೂರು, ನ.17- ಡಿಜಿಟಲ್ ತಂತ್ರಜ್ಞಾನದ ಹೊಸ ಶಾಖೆ ಆರಂಭವಾಗುತ್ತಿರುವ ನಡುವೆಯೇ ಯುವ ಸಮುದಾಯದ ಅದರಲ್ಲಿನ ವಿಫುಲ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಡಿಜಿಟಲ್ ಅಕಾಡೆಮಿ 360 ಸಂಸ್ಥೆ ಬೆಂಗಳೂರು-ಮೈಸೂರು ಮತ್ತು ನವದೆಹಲಿಯಲ್ಲಿ ಹೊಸ ತರಬೇತಿ ಕೇಂದ್ರಗಳನ್ನು ಆರಂಭಿಸಿದೆ.
ಡಿಜಿಟಲ್ ಮಾರುಕಟ್ಟೆ ವ್ಯಾಪ್ತಿ ಹಾಗೂ ಅದರಲ್ಲಿನ ತಂತ್ರಜ್ಞಾನ, ಕೌಶಲ್ಯ ಸೇರಿದಂತೆ ಹಲವು ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದ್ದು , ವಾರ್ಷಿಕ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಕಲಿಕಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಸಂಸ್ಥೆಯ ಸಿಇಒ ಯೋಗೇಶ್ ಶಶಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇಶದಲ್ಲಿ ಅಂತರ್ಜಾಲ ಬಳಕೆ ಹೆಚ್ಚಾಗುತ್ತಿದ್ದು , ಸಂಪರ್ಕ ಹಾಗೂ ಸಂವಹನ ಕ್ಷೇತ್ರದಲ್ಲಿ ನುರಿತ ತಂತ್ರಜ್ಞರಿಗೆ ವಿಫುಲ ಅವಕಾಶಗಳಿದೆ. ಇದನ್ನು ಬಳಸಿಕೊಳ್ಳಲು ಯುವ ಸಮುದಾಯವು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಮುನ್ನುಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಬದಲಾಗುವ ಸನ್ನಿವೇಶಗಳನ್ನು ದಿಟ್ಟವಾಗಿ ಎದುರಿಸಲು ನಮ್ಮ ಕೇಂದ್ರದಲ್ಲಿ ಸೂಕ್ತ ತರಬೇತಿಗಳು ಸಿಗಲಿದೆ ಎಂದು ಹೇಳಿದರು.