ಬೆಂಗಳೂರು,ನ.17-ಬೆಂಗಳೂರು ದೂರದರ್ಶನದ ಚರಿತ್ರೆಯಲ್ಲಿ ಮೈಲಿಗಲ್ಲಾಗಿರುವ ದೂರದರ್ಶನ ಚಂದನ ಪ್ರಶಸ್ತಿ-2018 ಪ್ರದಾನ ಸಮಾರಂಭ ಇಂದು ಸಂಜೆ 5.30ಕ್ಕೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ.
ಕೇಂದ್ರ ಸಚಿವ ಸದಾನಂದಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಬೆಂಗಳೂರು ದೂರದರ್ಶನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದ ಮುದ್ರಿತ ಪ್ರಸಾರ ನ.19ರಂದು ರಾತ್ರಿ 7.30ಕ್ಕೆ ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರವಾಗಲಿದೆ.
ಪ್ರಶಸ್ತಿ ಪುರಸ್ಕøತರ ಆಯ್ಕೆಯನ್ನು ಖ್ಯಾತ ಸಾಹಿತಿಗಳು ಮತ್ತು ವಿಮರ್ಶಕರಾದ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿನ ಉನ್ನತ ಆಯ್ಕೆ ಸಮಿತಿ, ಪುರಸ್ಕøತರನ್ನು ಆಯ್ಕೆ ಮಾಡಿದೆ.
ಈ ಸಮಿತಿಯಲ್ಲಿ ಬೆಂಗಳೂರು ವಿವಿ ಉಪಕುಲಪತಿ ಡಾ.ಕೆ.ಆರ್.ವೇಣುಗೋಪಾಲ್, ಚಲನಚಿತ್ರ ನಿರ್ದೇಶಕ ಸುರೇಶ್ ಹೆಬ್ಳಿಕರ್, ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ್ರಾವ್, ಹಿರಿಯ ವಕೀಲರದ ಪಿ.ಎಸ್.ರಾಜ್ಗೋಪಾಲ್, ಹಿರಿಯ ಪತ್ರಕರ್ತೆ ಸಿ.ಜಿ.ಮಂಜುಳಾ ಅವರು ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಉನ್ನತ ಆಯ್ಕೆ ಸಮಿತಿಗೆ ಬೆಂಬಲವಾಗಿ ಆಯಾ ಕ್ಷೇತ್ರದ ವಿಷಯತಜ್ಞರು ಕಾರ್ಯ ನಿರ್ವಹಿಸಿದ್ದಾರೆ.