ಬೆಂಗಳೂರು, ನ.17- ಕಾರ್ಯಸ್ಥಳಗಳಲ್ಲಿ ಉದ್ಯೋಗಿಗಳ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ನಿಭಾಯಿಸಲು ಉದ್ಯೋಗದಾತ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ವಲ್ರ್ಡ್ ಇಂಡಿಯಾ ಟ್ರಸ್ಟ್ ಆಗ್ರಹಿಸಿದೆ.
ಆರೋಗ್ಯ ವಲ್ರ್ಡ್ನ ಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಳಿನಿ ಸಾಲಿಗ್ರಾಮ ಅವರು ಮಾತನಾಡಿ, ಉದ್ಯೋಗಿಗಳು ತಮ್ಮ ತೊಂದರೆಗಳನ್ನು ಹೊರಹಾಕುವಲ್ಲಿ, ಚಿಕಿತ್ಸೆ ಪಡೆಯುವ ಮಾರ್ಗಗಳನ್ನು ಪೆÇ್ರೀ ಮತ್ತು ಅವರನ್ನು ಬೆಂಬಲಿಸುವ ಮಾನವ ಸಂಪನ್ಮೂಲ ನೀತಿಗಳನ್ನು ಕೈಗೊಳ್ಳಲು ಭಾರತದಲ್ಲಿನ ಸಂಸ್ಥೆಗಳನ್ನು ನಾವು ಪೆÇ್ರೀ ನಿಮ್ಮ ಕಂಪನಿ ಮತ್ತು ನಿಮ್ಮ ಕಾರ್ಯಪಡೆಯ ಆರೋಗ್ಯಗಳು ಇದರ ಬೇಡಿಕೆ ಹೊಂದಿವೆ. ಭಾರತದ ಭವಿಷ್ಯ ಮತ್ತು ಸ್ಪರ್ಧಾತ್ಮಕತೆ ಇದನ್ನು ಆಧರಿಸಿರುತ್ತದೆ ಎಂದರು.
ನಿಮ್ಹಾನ್ಸ್ನ ಮನೋವೈದ್ಯಶಾಸ್ತ್ರ ಪೆÇ್ರಫೆಸರ್ ಡಾ. ಪ್ರತಿಮಾ ಮೂರ್ತಿ ಮಾತನಾಡಿ, ಇಂದು ಉದ್ಯೋಗಿಗಳು ಖಿನ್ನತೆ, ಆತಂಕ ಮತ್ತು ಅತಿಯಾದ ಒತ್ತಡಗಳಂತಹ ಮಾನಸಿಕ ಸ್ಥಿತಿಗಳಿಂದ ಬಳಲುತ್ತಿದ್ದಾರೆ. ಅದು ಅವರ ವೃತ್ತಿಜೀವನವನ್ನು ಮಾತ್ರವಲ್ಲದೆ, ವೈಯಕ್ತಿಕ ಜೀವನದ ಮೇಲೆಯೂ ಪರಿಣಾಮ ಉಂಟು ಮಾಡುತ್ತಿದೆ. ಈ ಸಮಸ್ಯೆಯನ್ನು ಕೈಗೆತ್ತಿಕೊಂಡಿರುವುದಕ್ಕಾಗಿ ಆರೋಗ್ಯ ವಲ್ರ್ಡ್ ಇಂಡಿಯಾ ಟ್ರಸ್ಟ್ನ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ ಎಂದರು.
ವಿಪೆÇ್ರ ಲಿಮಿಟೆಡ್ನ ಸಾಂಸ್ಥಿಕ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಸುನೀತ ಚೆರಿಯನ್ ಮಾತನಾಡಿ, ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ಸೂಕ್ತ ನೆರವನ್ನು ಕೋರಬಹುದಾದ ಮತ್ತು ಯಾವುದೇ ಕಳಂಕವಿಲ್ಲದೆ ಮಾನಸಿಕ ಆರೋಗ್ಯ ಕುರಿತು ಸಂವೇದನೆ ಹೊಂದಿರುವ ಕಾರ್ಯಸ್ಥಳ ವಾತಾವರಣ ಸೃಷ್ಟಿಸುವಲ್ಲಿ ನಾವು ಪ್ರಯತ್ನ ನಡೆಸಿದ್ದೇವೆ. ನಮ್ಮ ಉದ್ಯೋಗಿಗಳಿಗೆ ಸಲಹೆ ಮತ್ತು ಆರೈಕೆ ಲಭ್ಯವಾಗುವಂತಹ ನಮ್ಮ ಜನನೀತಿಗಳ ಮೂಲಕ ಇದನ್ನು ನಾವು ಪೆÇ್ರೀ ಎಂದರು.