ಬೆಂಗಳೂರು, ನ.16- ವಿವಾದದ ಕೇಂದ್ರ ಬಿಂದುವಾಗಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಕುರಿತು ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಸಲ್ಲಿಸಿರುವ ಪ್ರಾಥಮಿಕ ತನಿಖಾ ವರದಿ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಇದರಲ್ಲಿ ಕೆಲವು ಅಂಶಗಳು ಸರಿಯಿದ್ದರೂ ಇನ್ನೂ ಕೆಲವು ಸಂಗತಿಗಳು ತರ್ಕಯೋಗ್ಯವಲ್ಲ. ಆದ್ದರಿಂದ ಈ ಬಗ್ಗೆ ಮತ್ತಷ್ಟು ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ಗೋಗಯ್ ನೇತೃತ್ವದ ಪೀಠವು ಸಿವಿಸಿ ಗೌಪ್ಯ ವರದಿಯನ್ನು ಪರಾಮರ್ಶಿಸಿದ ನಂತರ ಅದರಲ್ಲಿನ ಅಂಶಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತು.
ಈ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸೇವೆ ನಿರ್ದೇಶಕ ವರ್ಮಾ ಅವರಿಗೂ ನೀಡಬೇಕು ಎಂದು ಸಿವಿಸಿಗೆ ನಿರ್ದೇಶನ ನೀಡಿರುವ ಪೀಠ ಮುಚ್ಚಿದ ಲಕೋಟೆಯಲ್ಲಿ ಈ ಬಗ್ಗೆ ಸೋಮವಾರದೊಳಗೆ ಪ್ರತಿಕ್ರಿಯೆ ನೀಡುವಂತೆಯೂ ಕೇಂದ್ರೀಯ ತನಿಖಾ ದಳದ ಮುಖ್ಯಸ್ಥರಿಗೆ ಸೂಚಿಸಿತ್ತು.
ಈ ಪ್ರಕರಣದ ಮುಂದಿನ ವಿಚಾರಣೆಯನ್ನುನ.20ಕ್ಕೆ ಮುಂದೂಡಲಾಗಿದೆ.