ದೇಶಾದ್ಯಂತ ಡಿಜಿಟಲ್ ಕ್ರಾಂತಿ ಸೃಷ್ಟಿಸಿದ ನವೋದ್ಯಮಗಳು

ಬೆಂಗಳೂರು,ನ.16-ನವೋದ್ಯಮಗಳು ದೇಶಾದ್ಯಂತ ಡಿಜಿಟಲ್ ಕ್ರಾಂತಿ ಸೃಷ್ಟಿಸಿವೆ. ಎಲ್ಲಾ ರಂಗದಲ್ಲೂ ಈಗ ನವೋದ್ಯಮಗಳದ್ದೇ ಮಾತು. ಆದರೆ ಬೆಂಗಳೂರಿನಲ್ಲಿ ಆರಂಭವಾಗಿರುವ ರೈತರ ಬೇಕ್ ಶಾಪ್ ಉಳಿದ ನವೋದ್ಯಮಗಳಿಗಿಂತ ತೀರಾ ಭಿನ್ನ.

ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ, ರೈತರ ಬಾಳು ಬೆಳಗಿಸಲು ಈ ನವೋದ್ಯಮ ಸಜ್ಜಾಗಿದೆ.
ರೈತರ ಬೇಕ್ ಶಾಪ್‍ನ ನವೋದ್ಯಮ ಕೃಷಿ ಉತ್ಪನ್ನಗಳಿಂದ ತಯಾರಿಸಿದ ಬೇಕರಿ ತಿನಿಸುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಪೆÇೀಷಕಾಂಶಯುಕ್ತ ಆಹಾರವನ್ನು ಎಲ್ಲರಿಗೂ ತಲುಪಿಸುವ ಮಹತ್ತರ ಗುರಿಯೊಂದಿಗೆ ಕಾಲಿಡುತ್ತಿದೆ. ನಮ್ಮ ರೈತರ ಬೇಕ್ ಶಾಪ್ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ನಮ್ಮ ರೈತರ ಬೇಕ್‍ಶಾಪ್ ಎಲ್ಲರ ಆಕರ್ಷಣೆಯ ಕೇಂದ್ರವಾಗಲಿದೆ.

ನವೋದ್ಯಮದ ಮೂಲಕ ರೈತರ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದರ ಜತೆಗೆ ಅವುಗಳಿಗೆ ಮಾರುಕಟ್ಟೆ ಒದಗಿಸಲಾಗುತ್ತದೆ. ಜೊತೆಗೆ ಸಾಮಾನ್ಯ ಬೇಕರಿಗಳಲ್ಲಿ ಬಳಸುವ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಮೈದಾದಂತಹ ಪದಾರ್ಥಗಳನ್ನು ಇಲ್ಲಿ ಸಂಪೂರ್ಣವಾಗಿ ತ್ಯಜಿಸಲಾಗಿದೆ.
ಕೃಷಿ ಉತ್ಪನ್ನಗಳಿಂದ ತಯಾರಿಸಿದ ನಮ್ಮ ರೈತರ ಬೇಕ್ ಶಾಪ್‍ನ ಬೇಕರಿ ತಿನಿಸುಗಳಲ್ಲಿ ಅಧಿಕ ಪ್ರಮಾಣದಲ್ಲಿ ರಾಗಿಯನ್ನು ಬಳಸಲಾಗುತ್ತಿದ್ದು, ಕಡಿಮೆ ಪ್ರಮಾಣದ ಎಣ್ಣೆ, ಕೊಬ್ಬಿನ ಅಂಶಗಳನ್ನು ಇದು ಒಳಗೊಂಡಿದೆ.
ಆರೋಗ್ಯಕರ ಬೇಕರಿ ತಿನಿಸುಗಳ ಮಾರಾಟ ಇದರ ಪ್ರಮುಖ ಗುರಿಯಾಗಿದ್ದು, ಎಲ್ಲಾ ವಯೋಮಾನದವರು ಆರೋಗ್ಯಪೂರ್ಣವಾಗಿರುವ ಈ ತಿನಿಸುಗಳನ್ನು ತಿನ್ನಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ