ನಾಗ್ಪುರ: ಕರ್ನಾಟಕ ಮತ್ತು ವಿದರ್ಭ ನಡುವಿನ ರಣಜಿ ಪಂದ್ಯ ರೋಚಕ ಘಟ್ಟ ತಲುಪಿದ್ದು ಕೊನೆಯ ಇಂದು ಗೆಲುವು ಯಾರಿಗೆ ಅನ್ನೊ ಪ್ರಶ್ನೆ ಮೂಡಿದೆ.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ವಿದರ್ಭ ತಂಡ ಎರಡು ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿ ಒಂದು ರನ್ ಮುನ್ನಡೆ ಪಡೆದಿದೆ. ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ ಒಟ್ಟು 378 ರನ್ ಗಳಿಸಿತ್ತು. ಕರ್ನಾಟಕ ತಂಡದ ಪರ ನಿಶ್ಚೆಲ್ 113 ಮತ್ತು ಆಲ್ರೌಂಡರ್ ಬಿ.ಆರ್.ಅಮೋಘ 103 ರನ್ ಗಳಿಸಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ನರೆವಾದರು. ವಿದರ್ಭ ಪರ ಸರ್ವಟೆ 5ವಿಕೆಟ್ ಪಡೆದು ಮಿಂಚಿದ್ರು. ಗುರುವಾರ ಕೊನೆಯ ದಿನವಾಗಿದ್ದು ವಿನಯ್ ಪಡೆ ಆದಷ್ಟು ಬೇಗ ವಿದರ್ಭ ಬ್ಯಾಟ್ಸ್ಮನ್ಗಳನ್ನ ಕಟ್ಟಿ ಹಾಕಿದ್ರೆ ಗೆಲುವನ್ನ ಸುಲಭವಾಗಿ ಪಡೆಯಬಹುದಾಗಿದೆ.