ಬಿಗ್ ಪೀಪಲ್, ಬಿಗ್ ಟಾಕ್: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ನ.15- ಮೈತ್ರಿ ಸರ್ಕಾರ ನನ್ನನ್ನು ಗುರಿಯಾಗಿಟ್ಟುಕೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಇನ್ನು ಮುಂದೆ ನಾನು ಸುಮ್ಮನಿರುವುದಿಲ್ಲ ಎಂದು ಜನಾರ್ದನರೆಡ್ಡಿ ಹೇಳಿರುವುದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, ಬಿಗ್ ಪೀಪಲ್, ಬಿಗ್ ಟಾಕ್, ಅವರಿಗೆ ಒಳ್ಳೆಯದಾಗಲಿ, ಯಾರು ಏನು ಬೇಕಾದರೂ ಮಾಡಲಿ, ಮಾತನಾಡಲಿ ನಾನು ಎಲ್ಲವನ್ನೂ ಪ್ರಸಾದ ಎಂದು ಸ್ವೀಕರಿಸುತ್ತೇನೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆಂಬಿಡೆಂಟ್ ಕಂಪೆನಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದಿನಬೆಳಗಾದರೆ ಪತ್ರಿಕೆಯಲ್ಲಿ ಹೆಡ್‍ಲೈನ್ ನೋಡಿ ತಿಳಿದುಕೊಳ್ಳುತ್ತೇನೆ. ಪೂರ್ತಿ ವಿವರ ಓದಲು ಸಮಯ ಇಲ್ಲ. ಸದ್ಯಕ್ಕೆ ನನಗಿರುವ ಕೆಲಸಗಳನ್ನು ಮಾಡಿದರೆ ಸಾಕಾಗಿದೆ. ಆಂಬಿಡೆಂಟ್ ಕಂಪೆನಿ ವಂಚನೆ ಬಗ್ಗೆ ಮಾತನಾಡಲು ನಾನು ಗೃಹ ಸಚಿವನೂ ಅಲ್ಲ, ಪೆÇಲೀಸ್ ಆಯುಕ್ತನೂ ಅಲ್ಲ ಎಂದರು.

ಮೈಸೂರಿನ ಕೆಆರ್‍ಎಸ್‍ನಲ್ಲಿ ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸಲು ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ. ಅದಕ್ಕಾಗಿ ಈಗಾಗಲೇ ಯೋಜನೆಯ ರೂಪುರೇಷೆಗಳನ್ನು ರೂಪಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಈಗಾಗಲೇ ಕೆಆರ್‍ಎಸ್‍ನಲ್ಲಿ ಸಂಗೀತ ಕಾರಂಜಿ, ವೃಂದಾವನ ಉದ್ಯಾನವನ ಸೇರಿದಂತೆ ಹಲವಾರು ಮನೋರಂಜನಾ ಸ್ಥಳಗಳಿವೆ. ಅದರ ಜತೆ ಇನ್ನಷ್ಟು ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸಲು ನೀಲ ನಕ್ಷೆ ಸಿದ್ದಗೊಳಿಸಲಾಗುತ್ತಿದೆ. ಅಲ್ಲಿ ಯಾವೆಲ್ಲ ಸೌಲಭ್ಯ ಅಳವಡಿಸಬೇಕು ಎಂಬ ಬಗ್ಗೆ ಖಾಸಗಿ ಕಂಪೆನಿಯವರು ಅಂದಾಜು ಯೋಜನೆಯನ್ನು ಸಿದ್ದಪಡಿಸಿದ್ದಾರೆ. ಅದರಲ್ಲಿ ಬೃಹತ್ ಎತ್ತರದ ಕಾವೇರಿ ಮಾತೆ ಪ್ರತಿಮೆಯನ್ನು ನಿರ್ಮಿಸುವುದು. ಪ್ರತಿಮೆ ಒಳ ಭಾಗದಲ್ಲಿ ಲಿಫ್ಟ್ ಅಳವಡಿಸಿ ಎತ್ತರ ಭಾಗದಲ್ಲಿ ಅಟ್ಟಣಿಗೆ ನಿರ್ಮಿಸಿ ಗಾಜಿನ ಕಿಟಕಿಯ ಮೂಲಕ ಅಣೆಕಟ್ಟನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಲು ಅನುಕೂಲ ಕಲ್ಪಿಸುವುದು ಯೋಜನೆಯ ಪಟ್ಟಿಯಲ್ಲಿದೆ.

ಗ್ಲೋಬಲ್ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗುವುದು. ಗುತ್ತಿಗೆದಾರರು ಸರ್ಕಾರ ಸೂಚಿಸಿದ ಸೌಲಭ್ಯಗಳನ್ನು ನೀಡಿ ಅದಕ್ಕೆ ಪ್ರವಾಸಿಗರಿಂದ ಶುಲ್ಕ ಸಂಗ್ರಹಿಸುತ್ತಾರೆ. ಯೋಜನೆಯ ಸಂಪೂರ್ಣ ವೆಚ್ಚವನ್ನು ಖಾಸಗಿ ಕಂಪೆನಿಗಳೇ ಭರಿಸುತ್ತವೆ. ಸರ್ಕಾರಕ್ಕೂ ನಿರ್ದಿಷ್ಟ ಪ್ರಮಾಣದ ಆದಾಯ ನೀಡುತ್ತದೆ. ಯೋಜನೆಯ ಆರಂಭದಲ್ಲಿ ಸರ್ಕಾರ ಹಣ ಹೂಡಿಕೆ ಮಾಡಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ