ಬೆಂಗಳೂರು: ನಿನ್ನೆ ಅಗಲಿದ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರಿಗೆ ಬಿಜೆಪಿ ಕಚೇರಿಯಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಅನಂತ್ ಕುಮಾರ್ ಪಾರ್ಥಿವ ಶರೀರವನ್ನು ಸೇನಾ ವಾಹನದಲ್ಲಿ ತಂದು ಅಂತಿಮ ನಮನ ಸಲ್ಲಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮೊದಲು ಪಕ್ಷದ ಪರವಾಗಿ ಅಂತಿಮ ನಮನ ಸಲ್ಲಿಸಿದರು.
ನಂತರ ಅನಂತ್ ಕುಮಾರ್ ಅವರ ಪತ್ನಿ, ಪುತ್ರಿಯರು ಸೇರಿದಂತೆ ಕುಟುಂಬ ಸದಸ್ಯರು ನಮನ ಸಲ್ಲಿಸಿದರು. ಬಳಿಕ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ, ಅನುರಾಗ್ ಠಾಕೂರ್, ಕೆ ಎಸ್ ಈಶ್ವರಪ್ಪ, ವಿ ಸೋಮಣ್ಣ, ಅರವಿಂದ ಲಿಂಬಾವಳಿ ಸೇರಿದಂತೆ ಪಕ್ಷದ ನಾಯಕರು, ಸಂಘ ಪರಿವಾರದ ಪ್ರಮುಖರು, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್, ರಾಜ್ಯ ಉಸ್ತುವಾರಿ ಮುರುಳೀಧರರಾವ್, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ರಾಜೀವ್ ಚಂದ್ರಶೇಖರ್, ವಿಶ್ವೇಶ್ವರ ಹೆಗಡೆ, ಸಂಜಯ್ ಜೋಶಿ, ಪಿ ರಾಮಯ್ಯ, ಎಂ ರಘುಪತಿ, ಆರ್ ಅಶೋಕ್, ರಾಮ್ ಲಾಲ್ ಜೀ, ಶ್ರೀ ಪಿ ಮುರಳೀಧರ ರಾವ್ ಸೇರಿದಂತೆ ಅನೇಕ ಗಣ್ಯರು ತಮ್ಮ ನೆಚ್ಚಿನ ನಾಯಕ ಅನಂತಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಗಣ್ಯರ ನಂತರ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಯಿತು. ಸರತಿ ಸಾಲಿನಲ್ಲಿ ಆಗಮಿಸಿದ ಅನಂತ್ ಕುಮಾರ್ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಪಾರ್ಥೀ
ವ ಶರೀರದ ಅಂತಿಮ ದರ್ಶನ ಮಾಡಿದರು. ಇನ್ನು ಬಿಜೆಪಿ ಕಚೇರಿಯಲ್ಲಿ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಪಾರ್ಥೀವ ಶರೀರ 10:15ಕ್ಕೆ ಬಿಜೆಪಿ ಕಚೇರಿಯಿಂದ ನಿರ್ಗಮಿಸಿ, ನ್ಯಾಷನಲ್ ಕಾಲೇಜು ಮೈದಾನದ ಕಡೆ ಪಾರ್ಥಿವ ಶರೀರವಿರುವ ವಾಹನ ಹೊರಟಿದೆ.