ದೇಶದ ಮೊದಲ ಒಳನಾಡು ಬಂದರು ಲೋಕಾರ್ಪಣೆ

ವಾರಣಾಸಿ: ದೇಶದ ಮೊದಲ ಒಳನಾಡು ಬಂದರನ್ನು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಲೋಕಾರ್ಪಣೆ ಮಾಡಿದರು. ಈ ಮೂಲಕ ಒಳನಾಡಿನ ಜಲ ಮಾರ್ಗಗಳ ಸದ್ಬಳಕೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

ಪ್ರಧಾನಿ ಮೋದಿ ಸ್ವ ಕ್ಷೇತ್ರ ವಾರಾಣಸಿಯಲ್ಲಿ ಇಂದು ಗಂಗಾ ನದಿಯ ಮೇಲೆ ನಿರ್ಮಾಣಗೊಂಡಿರುವ ಒಳನಾಡು ಬಂದರನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಬಂದರು ಸಚಿವ ನಿತಿನ್ ಗಡ್ಕರಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೊದಲಾದವರು ಉಪಸ್ಥಿತರಿದ್ದರು.

ಈ ಒಳನಾಡು ಬಂದರು ಉತ್ತರ ಪ್ರದೇಶದ ಹಾಲ್ದಿಯಾ ದಿಂದ ಆರಂಭಗೊಂಡು ಪಶ್ಚಿಮ ಬಂಗಾಳದವರೆಗೆ ಸಾಗುತ್ತದೆ. ಅಕ್ಟೋಬರ್ 30ರಂದು ಪೆಪ್ಸಿಕೋ ಇಂಡಿಯಾಗೆ ಸೇರಿದ ಭಾರತದ ಮೊಟ್ಟ ಮೊದಲ ಒಳನಾಡು ಸರಕು ಹಡಗು, ಸರಕು ತುಂಬಿಕೊಂಡು ಕೋಲ್ಕತ್ತಾದಿಂದ ಸಾಗಿ ಬಂದಿದೆ. ಇಂದು ಈ ಹಡಗು​ ವಾರಣಾಸಿಗೆ ಬಂದು ತಲುಪಿದ್ದು, ಪ್ರಧಾನಿ ಮೋದಿ ಬರಮಾಡಿಕೊಂಡರು. ಈ ಮಾರ್ಗ ರಾಷ್ಟ್ರೀಯ ಜಲ ಮಾರ್ಗ-1 ಎಂದು ಹೆಸರು ಪಡೆದಿದೆ.

PM Modi Unveils Varanasi Port, Receives India’s First Inland Cargo Vessel

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ