
ಬೆಂಗಳೂರು, ನ.12-ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ನ.14ರಂದು ನಡೆಯಬೇಕಿದ್ದ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಮೃತರ ಗೌರವಾರ್ಥ ರಾಜ್ಯದಲ್ಲಿ ಇಂದಿನಿಂದ ನ.14ರವರೆಗೆ ಮೂರು ದಿನಗಳ ಕಾಲ ಶೋಕಾಚರಣೆ ಸೂಚಿಸಿರುವುದರಿಂದ ಈ ಅವಧಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳು ನಡೆಯುವುದಿಲ್ಲ.
ಬೀದರ್ನಲ್ಲಿ ನ.14 ರಂದು ಉದ್ಘಾಟನೆಯಾಗಬೇಕಿದ್ದ ಸಹಕಾರ ಸಪ್ತಾಹವನ್ನ ನ.15ಕ್ಕೆ ಮುಂದೂಡಲಾಗಿದೆ.
ನ.15ರಂದು ಶಿರಸಿಯಲ್ಲಿ ಸಹಕಾರ ಸಪ್ತಾಹ ನಡೆಯಬೇಕಿದ್ದ ಕಾರ್ಯಕ್ರಮವನ್ನು ನ.21ಕ್ಕೆ ಮುಂದೂಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.