ಕೊನೆಯ ಎಸೆತದಲ್ಲಿ ಗೆದ್ದ ಟೀಂ ಇಂಡಿಯಾ: ವಿಂಡೀಸ್ ಕ್ಲೀನ್‍ಸ್ವೀಪ್

ಚೆನ್ನೈ: ವಿಂಡೀಸ್ ವಿರುದ್ಧ ಮೂರನೆ ಟಿ20 ಪಂದ್ಯದಲ್ಲಿ ಟೀಂಇಂಡಿಯಾ ಕೊನೆಯ ಎಸೆತದಲ್ಲಿ ರೋಚಕವಾಗಿ 6 ವಿಕೆಟ್‍ಗಳ ಅಂತರದಿಂದ ಗೆದ್ದು ಸರಣಿಯನ್ನ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ.
ನಿನ್ನೆ ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ನಿಗದಿತ ಓವರ್‍ನಲ್ಲಿ 3 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಟೀಂ ಇಂಡಿಯಾ ನಿಗದಿತ ಓವರ್‍ನಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಗೆದ್ದು ಬೀಗಿತು.
ಭಾರತ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್ 92, ರಿಷಭ್ ಪಂತ್ 58, ಮನೀಶ್ ಪಾಂಡೆ ಅಜೇಯ 4 ಮತ್ತು ರೋಹಿತ್ ಶರ್ಮಾ 4 , ಕೆ.ಎಲ್. ರಾಹುಲ್ 17 ರನ್ ಗಳಿಸಿದ್ರು.
ಇದಕ್ಕೂ ಮುನ್ನ ವಿಂಡೀಸ್ ಪರ ನಿಕೊಲೊಸ್ ಪೂರಣ್ ಅಜೇಯ 53, ಡೆರೆನ್ ಬ್ರಾವೋ ಅಜೇಯ 43 , ಹೋಪ್ 24, ಹೇಟ್ಮರ್ 26 ರನ್ ಗಳಿಸಿದರು.ಭಾರತ ಪರ ಚಹಲ್ 2 ಮತ್ತು ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ