ಬದ್ಧ ವೈರಿ ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಗಯಾನಾ: ಓಪನರ್ ಮಿಥಾಲಿ ರಾಜ್ ಅವರ ಅರ್ಧ ಶತಕದ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡ ಬದ್ಧ ವೈರಿ ಪಾಕಿಸ್ತಾನ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಹರ್ಮನ್‍ಪ್ರೀತ್ ಪಡೆ ವಿಶ್ವ ಟಿ20 ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು. ಭಾರತ ತಂಡ 19 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಗೆಲುವು ಪಡೆಯಿತು.
ಭಾರತ ಪರ ಮಿಥಾಲಿ ರಾಜ್ 56, ಸ್ಮøತಿ ಮಂದಾನ 26, ರೊಡ್ರಿಗಸ್ 16, ಹರ್ಮನ್‍ಪ್ರೀತ್ ಕೌರ್ ಅಜೇಯ 14, ವೇದಾ ಅಜೇಯ 8 ರನ್ ಗಳಿಸಿದ್ರು. ಇದಕ್ಕೂ ಮುನ್ನ ಪಾಕ್ ಪರ ಬಿಸ್ಮಾ ಮಹಾರೂಫ್ 53, ಮತ್ತು ನಿಧಾ ದಾರ್ 52 ರನ್ ಗಳಿಸಿ ತಂಡಕ್ಕೆ ನೆರವಾಗಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ