ಬೆಂಗಳೂರು, ನ.12- ಅಜಾತಶತ್ರು, ರಾಜಕೀಯ ಚತುರ, ಸಂಘಟನಾ ನಿಪುಣ, ಉತ್ತಮ ಸಂಸದೀಯ ಪಟು ಎಂದೇ ಗುರುತಿಸಿಕೊಂಡಿರುವ ಕೇಂದ್ರ ಸಚಿವ ಅನಂತ್ಕುಮಾರ್ ಅವರ ಸಾಧನೆ ಪಟ್ಟಿ ದೊಡ್ಡದು.
* ದಕ್ಷಿಣ ಭಾರತದ ಬಿಜೆಪಿಯ ಪವರ್ಹೌಸ್. ದೆಹಲಿಯಲ್ಲಿ ಕನ್ನಡಿಗರ ಧ್ವನಿಯಾಗಿದ್ದ ಅಖಂಡ ಕರ್ನಾಟಕದ ಪ್ರಚಂಡ ಜನಶಕ್ತಿ ಅಧ್ವರ್ಯು.
* ಮೂರು ದಶಕಗಳ ರಾಜಕೀಯ ಜೀವನದಲ್ಲಿ ಆರು ಬಾರಿ ಸಂಸದರಾಗಿದ್ದ ಅನಂತ್ಕುಮಾರ್ 10 ಮಹತ್ವದ ಖಾತೆಗಳನ್ನು ನಿಭಾಯಿಸಿದ ಏಕೈಕ ರಾಜಕೀಯ ನಾಯಕ.
* ವಿಮಾನಯಾನ, ನಗರಾಭಿವೃದ್ಧಿ, ಬಡತನ ನಿರ್ಮೂಲನೆ, ಕ್ರೀಡೆ, ಯುವಜನ ಸೇವೆ, ರಾಸಾಯನಿಕ, ರಸಗೊಬ್ಬರ, ಸಂಸದೀಯ ವ್ಯವಹಾರ ಸೇರಿದಂತೆ ಅನೇಕ ಪ್ರಮುಖ ಖಾತೆಗಳ ಯಶಸ್ವಿ ನಿರ್ವಹಣೆ.
* ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಮಹತ್ವದ ಪಾತ್ರ.
* ಉದ್ಯಾನನಗರಿ ಬೆಂಗಳೂರು ಮೆಟ್ರೋ ಅನುಷ್ಠಾನಕ್ಕೆ ನೆರವು.
* ದೇಶವ್ಯಾಪಿ ಏಕರೂಪದ ಜಿಎಸ್ಟಿ ತೆರಿಗೆ ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ.
* ಜನೌಷಧಿಯ ರೂವಾರಿ, ದೇಶದಲ್ಲಿ 3600ಕ್ಕೂ ಹೆಚ್ಚು ಜನೌಷಧಿ ಮಳಿಗೆಗಳ ಸ್ಥಾಪನೆಯ ಕಾರಣಕರ್ತ.
* ಶೇ.85ರಷ್ಟು ಕಡಿಮೆ ವೆಚ್ಚದಲ್ಲಿ ಬಡವರಿಗೆ ಹೃದಯ ಸ್ಟಂಟ್, ಮೊಣಕಾಲು ಶಸ್ತ್ರ ಚಿಕಿತ್ಸೆ ಮತ್ತು ಪಾದ ಜೋಡಣೆಗೆ ನೆರವು.
* ರಾಸಾಯನಿಕ ಗೊಬ್ಬರ ಮತ್ತು ಔಷಧಿ ಮಾಫಿಯಾಗೆ ಕಡಿವಾಣ ಹಾಕಿದ ನಿಷ್ಠೂರ ರಾಜಕಾರಣಿ.
* ಎಲ್.ಕೆ.ಅಡ್ವಾಣಿ ನಂತರ ಬಿಜೆಪಿಯಲ್ಲಿ ಅತಿ ಹೆಚ್ಚು ಸ್ಥಾಯಿ ಸಮಿತಿಗಳ ನಿರ್ವಹಣೆ ಮಾಡಿದ ರಾಜಕೀಯ ಚತುರ.
* ರೈತರಿಗೆ ಸಬ್ಸಿಡಿ ದರದಲ್ಲಿ ಯೂರಿಯಾ, ರಸಗೊಬ್ಬರ ಪೂರೈಸಿದ ಕೃಷಿಕ ಮಿತ್ರ ಅನಂತ್.
* ದೇಶದಲ್ಲಿ ಪ್ರಪ್ರಥಮ ಬಾರಿಗೆ ಬೇವು ಲೇಪಿತ ಯೂರಿಯಾ, ರಸಗೊಬ್ಬರ ಪೂರೈಕೆ ಮಾಡಿದ ಹೆಗ್ಗಳಿಕೆ.
* ರಾಜಕಾರಣದ ಜತೆಗೆ ಸಮಾಜ ಸೇವೆಯಲ್ಲಿಯೂ ಮುಂಚೂಣಿ.
* ಅದಮ್ಯ ಚೇತನ, ಅನ್ನಪೂರ್ಣ ಯೋಜನೆ ಮೂಲಕ ವಿದ್ಯಾರ್ಥಿಗಳು ಮತ್ತು ಬಡವರಿಗೆ ನೆರವು.
* ಕಾವೇರಿ ಸೇರಿದಂತೆ ಕರ್ನಾಟಕದ ಪ್ರಮುಖ ಸಮಸ್ಯೆಗಳ ಇತ್ಯರ್ಥಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಿದ್ದ ಜನಪ್ರಿಯ ಸಂಸದ.