ಅನಂತ್ ಕುಮಾರ್ ಕಳೆದುಕೊಂಡು ಪಕ್ಷ, ನಾಡು, ದೇಶ ಬಡವಾಗಿದೆ:  ಬಿಎಸ್ ಯಡಿಯೂರಪ್ಪ

ಬೆಂಗಳೂರು: ಹಿರಿಯ ನೇತಾರ, ನಮ್ಮ ಜೊತೆಗಾರ ಅನಂತಕುಮಾರ್ ಅವರ ನಿಧನವು ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ಆದ ಭಾರೀ ನಷ್ಟ. ಅವರನ್ನು ಕಳೆದುಕೊಂಡು ಪಕ್ಷ, ನಾಡು, ದೇಶ ಬಡವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಂಬನಿ ಮಿಡಿದಿದ್ದಾರೆ.

ಪ್ರತೀನಿತ್ಯ ಪಕ್ಷದ ಸಂಘಟನೆಯನ್ನು ಬೆಳೆಸಲು ನಾವು ಸಮಾಲೋಚನೆ ಮಾಡುತ್ತಿದ್ದುದನ್ನು ಮರೆಯಲಾಗದು. ರಾಜಕೀಯವಾಗಿ ಬಹಳ ಬೇಗ ಉನ್ನತ ಸ್ಥಾನದವರೆಗೂ ಏರಿದ ಅವರು ರಾಜಕೀಯವಾಗಿ ಬಹಳಷ್ಟು ಕ್ಲಿಷ್ಟ ಸಂದರ್ಭಗಳಲ್ಲಿ ಉತ್ತಮ ಸಲಹೆಗಳನ್ನು ನೀಡಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು.

ಒಮ್ಮೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೂ ಅವರು ಪಕ್ಷದ ಬೆಳವಣಿಗೆಗೆ ಕಾರಣರಾಗಿದ್ದ ಅನಂತಕುಮಾರ್ ಅವರ ಕೊಡುಗೆಯನ್ನು ಮರೆಯಲಾಗದು. ಅವರ ನಿಧನಕ್ಕೆ  ಸಂತಾಪ ವ್ಯಕ್ತಪಡಿಸುತ್ತೇನೆ.ಅವರ ಕುಟುಂಬಕ್ಕೆ ದುಃಖ ಭರಿಸಲು ದೇವರು ಶಕ್ತಿ ನೀಡಲಿ ಎಂದು ಬಿಎಸ್ವೈ ಪ್ರಾರ್ಥಿಸಿದ್ದಾರೆ.
 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ