ನವದೆಹಲಿ: ಇತ್ತೀಚಿಗಷ್ಟೇ ಸಿಬಿಐ ಮುಖ್ಯಸ್ಥರನ್ನು ರಜೆ ಮೇರೆಗೆ ಕಳುಹಿಸಿದ ಹಿನ್ನಲೆಯಲ್ಲಿ ವಿರೋಧ ಪಕ್ಷದ ಕೆಂಗಣ್ಣಿಗೆ ಕೇಂದ್ರ ಸರ್ಕಾರವು ಗುರಿಯಾಗಿತ್ತು.ಈ ಹಿನ್ನಲೆಯಲ್ಲಿ ಈಗ ಸಿಬಿಐ 150 ಅಧಿಕಾರಿಗಳಿಗೆ ಸಕಾರಾತ್ಮಕ ಚಿಂತನೆ ಮೂಡಿಸುವ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಶಿಬಿರವನ್ನು ನವಂಬರ 10 ರಿಂದ ಮೂರು ದಿನಗಳ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ತಮ್ಮ ಮೇಲೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತನಾ ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕೇಂದ್ರೀಯ ವಿಜಿಲೆನ್ಸ್ ಕಮೀಷನರ್ (ಸಿವಿಸಿ) ಕೆ.ವಿ.ಚೌಡರಿ ಎದುರು ಹಾಜರಾಗಿದ್ದರು.ಆ ಸಂದರ್ಭದಲ್ಲಿ ವರ್ಮಾ ಮತ್ತು ಅಸ್ತಾನಾ ಅವರು ಸಿವಿಸಿ ಚೌದರಿಯವರನ್ನು ಭೇಟಿ ಮಾಡಿದ್ದರು.ನಿಖಾ ಸಂಸ್ಥೆಯ ಮಧ್ಯಂತರ ಮುಖ್ಯಸ್ಥರಾಗಿ ಪ್ರಧಾನಿ ನೇತೃತ್ವದ ನೇಮಕಾತಿ ಸಮಿತಿ ಎಂ.ನಾಗೇಶ್ವರ ರಾವ್ ನೇಮಕ ಮಾಡಿದ ನಂತರ ಸಿಬಿಐ ವಿವಾದಕ್ಕೆ ಕಾರಣವಾಗಿದೆ.ಏಕೆಂದರೆ ಇವರ ನೇಮಕದ ನಂತರ ಸಿಬಿಐ ನ ಮೂರು ಉನ್ನತ ಅಧಿಕಾರಿಗಳಾದ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ, ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಮತ್ತು ಹೆಚ್ಚುವರಿ ನಿರ್ದೇಶಕ ಎ.ಕೆ ಶರ್ಮ – ರಜೆಯ ಮೇಲೆ ಕಳುಹಿಸಲಾಗಿತ್ತು ಅಲ್ಲದೆ ಸೂಕ್ಷ ವಿಷಯಗಳನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಅಧಿಕಾರಿಗಳಲ್ಲಿ ಸಕಾರಾತ್ಮಕ ಚಿಂತನೆ ಹಾಗೂ ಆರೋಗ್ಯಕರ ವಾತಾವರಣವನ್ನು ಸಿಬಿಐನಲ್ಲಿ ಮೂಡಿಸುವ ಸಲುವಾಗಿ ಈಗ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉನ್ನತ ತನಿಖಾ ಸಂಸ್ಥೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.