ಫರೀದಾಬಾದ್: ಮಾಜಿ ನೌಕರನೊಬ್ಬ ಟಾಟಾ ಸ್ಟೀಲ್ ಕಂಪನಿಯ ಹಿರಿಯ ಮ್ಯಾನೇಜರ್ ಒಬ್ಬರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಫರಿದಾಬಾದ್ ನಲ್ಲಿ ನಡೆದಿದೆ.
ಹತ್ಯೆಗೀಡಾದ ಮ್ಯಾನೇಜರ್ ಅರವಿಂದಮ್ ಪಲ್ ಎಂದು ತಿಳಿದುಬಂದಿದೆ. ಫರೀದಾಬಾದ್ ನ ಕಚೇರಿಯಲ್ಲಿಯೇ ಮ್ಯಾನೇಜರ್ ಅರವಿಂದಮ್ ರನ್ನು ಮಾಜಿ ನೌಕರ ವಿಶ್ವನಾಥ್ ಪಾಂಡೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಟಾಟಾ ಸ್ಟೀಲ್ ಪ್ರೊಸೆಸಿಂಗ್ ಅಂಡ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಹೇಳಿಕೆಯಲ್ಲಿ ತಿಳಿಸಿದೆ.
ಗಂಭೀರವಾಗಿ ಗಾಯಗೊಂಡಿದ್ದ ಅರವಿಂದಮ್ ರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಮಾರ್ಗಮಧ್ಯವೇ ಅವರು ಕೊನೆಯುಸಿರೆಳೆದಿದ್ದಾರೆ. ಅರವಿಂದ್ ದೇಹದೊಳಗೆ ಐದು ಬುಲೆಟ್ ಗಳು ಹೊಕ್ಕಿದ್ದವು. ಪ್ರಕರಣ ಸಂಬಂಧ ಪೊಲೀಸರು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಟಾಟಾ ಸ್ಟೀಲ್ ಪ್ರೊಸೆಸಿಂಗ್ ಅಂಡ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಕಂಪನಿಯಲ್ಲಿ ಪಾಂಡೆ, 2015ರಿಂದ 2018ರ ವರೆಗೆ ಕೆಲಸ ಮಾಡಿದ್ದು, ಈ ವರ್ಷದ ಆಗಸ್ಟ್ ತಿಂಗಳಿನಿಂದ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.
Tata Steel Manager, Shot Dead, Faridabad, Allegedly By Former Employee