ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಪೇಟಿಯಂ ಮೂಲಕ ಪಾವತಿ ಮಾಡಲು ವ್ಯವಸ್ಥೆ

ಬೆಂಗಳೂರು, ನ.9- ಡಿಜಿಟಲ್ ಇಂಡಿಯಾ ಗುರಿಗೆ ಪೂರಕವಾಗಿ ಡಿಜಿಟಲ್ ಪಾವತಿ ಪೇಟಿಯಂನಿಂದ ಬೆಂಗಳೂರು ಮಹಾನಗರ ಮತ್ತು ರಾಜ್ಯದ 17 ನಗರಗಳ ಬಳಕೆದಾರರಿಗೆ ಹೆಚ್ಚು ಉಪಯುಕ್ತವನ್ನಾಗಿಸಲಾಗಿದೆ ಎಂದು ಪೇಟಿಯಂನ ಸಿಇಒ ಕಿರಣ್ ವಸಿರೆಡ್ಡಿ ತಿಳಿಸಿದ್ದಾರೆ.
ಪೇಟಿಯಂ ಮಾಲಿಕತ್ವ ಹೊಂದಿದ ಒನ್97 ಕಮ್ಯುನಿಕೇಷನ್ ಲಿಮಿಟೆಡ್ ಕರ್ನಾಟಕದ ಅಂಗಸಂಸ್ಥೆಗಳಾದ ಇಡಿಸಿಎಸ್ ಮತ್ತು ಡಿಪಿಎಆರ್ (ಇ-ಆಡಳಿತ)ದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಪೇಟಿಯಂ ಮೂಲಕ ಪಾವತಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಕನಿಷ್ಟ 200ರೂ.ಗಳನ್ನು ಪಾವತಿಸುವ ಗ್ರಾಹಕರಿಗೆ ಆರಂಭಿಕ ಆಕರ್ಷಣೆಯಾಗಿ ಶೇ.10ರಷ್ಟು ಹಣವನ್ನು ಹಿಂದಿರುಗಿಸಲಾಗುತ್ತದೆ.
ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಅನೇಕ ಸೌಲಭ್ಯಗಳು ಒಂದೆಡೆ ಸಿಗಲು ನಿರ್ಮಿಸಿರುವ ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳೊಂದಿಗೆ ಸಹಭಾಗಿತ್ವ ಹೊಂದಿರುವ ಪೇಟಿಯಂನಿಂದ ಡಿಜಿಟಲ್ ಪಾವತಿ ಮಾಡುವ ಮೂಲಕ ಜನರನ್ನು ಸಬಲೀಕರಣಗೊಳಿಸಲಾಗುವುದು ಎಂದು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ