
ಬೆಂಗಳೂರು: ನಟ ದುನಿಯಾ ವಿಜಯ್ ಮನೆಗೆ ಹೋಗದಂತೆ ಮೊದಲ ಪತ್ನಿ ನಾಗರತ್ನಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಮಧ್ಯಂತರ ಆದೇಶವನ್ನು ನೀಡಿದೆ. ದುನಿಯಾ ವಿಜಯ್ ವಿರುದ್ಧ ಮಾಧ್ಯಮಗಳಿಗೆ ಸಂದರ್ಶನ ನೀಡುವಂತಿಲ್ಲ. ದುನಿಯಾ ವಿಜಿ ಆಗಲಿ ಅವರ ಕುಟುಂಬಸ್ಥರ ವಿರುದ್ಧವೂ ಬಹಿರಂಗವಾಗಿ ಹೇಳಿಕೆ ನೀಡುವಂತಿಲ್ಲ. ಪ್ರಕರಣದ ವಿಚಾರಣೆಯ ವೇಳೆ ಕ್ಯಾಮೆರಾ ಬಳಸುವಂತೆಯೂ ಸೂಚನೆ ನೀಡಲಾಗಿದೆ.
ಕೆಲವು ದಿನಗಳ ಹಿಂದೆ ದುನಿಯಾ ಪತ್ನಿಯರ ಜಡೆ ಜಗಳವನ್ನು ಇಡೀ ರಾಜ್ಯವೇ ನೋಡಿತ್ತು. ಪತ್ನಿಯರಿಬ್ಬರ ಜಗಳದಿಂದ ಬೇಸತ್ತ ವಿಜಿ ಮೊದಲ ಪತ್ನಿ ನಾಗರತ್ನರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.