ನವದೆಹಲಿ: ಸುಪ್ರೀಂಕೋರ್ಟಿನ ಆದೇಶವನ್ನು ಉಲ್ಲಂಘಿಸಿ ಎರಡೂ ಗಂಟೆಗೂ ಹೆಚ್ಚು ಕಾಲ ಪಟಾಕಿ ಸಿಡಿಸಿದ ಪರಿಣಾಮ ಗುರುವಾರ ಮುಂಜಾನೆ ದೆಹಲಿಯ ವಾತಾವರಣ ಸಂಪೂರ್ಣ ಹದಗೆಟ್ಟಿದೆ.
ಕಳೆದೊಂದು ವಾರದಿಂದ ಗಾಳಿಯ ಗುಣಮಟ್ಟ ದಿನೇ ದಿನೇ ಕುಸಿತವಾಗುತ್ತಿದ್ದು, ಗುರುವಾರ ಈ ಪ್ರಮಾಣ ಮತ್ತಷ್ಟು ಕೆಳಮಟ್ಟಕ್ಕೆ ಇಳಿದಿದೆ. ಸರ್ವೋಚ್ಛ ನ್ಯಾಯಾಲಯ ಪಟಾಕಿ ಸಿಡಿಸುವ ಕುರಿತು ನಿರ್ಬಂಧ ಹೇರಿದ್ದು, ರಾತ್ರಿ ಎಂಟರಿಂದ ಹತ್ತರವರೆಗೆ ಮಾತ್ರ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ದೆಹಲಿಯ ವಾಯು ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಈ ಆದೇಶವನ್ನು ನೀಡಲಾಗಿತ್ತು.
ಆದರೆ ಹಬ್ಬದ ಸಂಭ್ರಮದಲ್ಲಿ ದೆಹಲಿ ಜನತೆ ಸುಪ್ರೀಂ ಆದೇಶವನ್ನು ಗಾಳಿಗೆ ತೂರಿದ್ದು, ರಾತ್ರಿ ಹತ್ತರ ಬಳಿಕವೂ ಪಟಾಕಿ ಸಿಡಿಸುತ್ತಾ ಸಂಭ್ರಮಾಚಾರಣೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ