ವಾಷಿಂಗ್ಟನ್, ನ.7-ಅಮೆರಿಕದಲ್ಲಿ ನಿನ್ನೆ ನಡೆದ ಮಹತ್ವದ ಮಧ್ಯಂತರ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ವಿರೋಧ ಪಕ್ಷ ಡೆಮೊಕ್ರಾಟಿಕ್ ಪಾರ್ಟಿ ಹೌಸ್ ಆಫ್ ರೆಪ್ರೆಸೆಂಟಿಟಿವ್ನಲ್ಲಿ ಪ್ರಾಬಲ್ಯ ಸಾಧಿಸಿದ್ದರೆ, ಆಡಳಿತಾರೂಢ ರಿಪಬ್ಲಿಕನ್ ಪಾರ್ಟಿ ಸೆನೆಟ್ನಲ್ಲಿ ಬಹುಮತ ಗಳಿಸಿದೆ.
ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಸಂಜೆ ಅಥವಾ ನಾಳೆ ಬೆಳಗ್ಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭಿಸಲಿದೆ.
ಮಧ್ಯಂತರ ಚುನಾವಣೆಗಳ ಫಲಿತಾಂಶದ ವರದಿಗಳನ್ನು ಅಮೆರಿಕದ ಮಾಧ್ಯಮಗಳು ಬಿತ್ತರಿಸಿವೆ. 435 ಸದಸ್ಯ ಬಲದ ಹೌಸ್ ಆಫ್ ರೆಪ್ರೆಸೆಂಟಿಟಿವ್ಗೆ(ಭಾರತದ ಲೋಕಸಭೆಗೆ ಸಮಾನಾಂತರ) ಕಾಂಗ್ರೆಸ್ ನಾಯಕಿ ನ್ಯಾನ್ಸಿ ಪೆಲೋಸಿ(78) ಸ್ಪೀಕರ್ ಆಗಿ ಪುನರಾಯ್ಕೆಯಾಗುವ ನಿರೀಕ್ಷೆ ಇದೆ.
ಹೌಸ್ ಆಫ್ ರೆಪ್ರೆಸೆಂಟಿಟಿವ್ನಲ್ಲಿ ಈ ಹಿಂದೆ ರಿಪಬ್ಲಿಕನ್ ಪಕ್ಷ ಪ್ರಾಬಲ್ಯ ಹೊಂದಿತ್ತು(235), ಅಲ್ಲಿ ಡೆಮೊಕ್ರಾಟಿಕ್ ಪಕ್ಷ 193 ಸ್ಥಾನ ಗಳಿಸಿತ್ತು. ಮುಂದಿನ ಜನವರಿಯಿಂದ ಅಧಿಕೃತವಾಗಿ ಅಸ್ತಿತ್ವಕ್ಕೆ ಬರುವ ಈ ಸದನದಲ್ಲಿ ಈಗ ವಿರೋಧಪಕ್ಷ ಪ್ರಾಬಲ್ಯ ಹೊಂದಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷವು ಸೆನೆಟ್ನಲ್ಲಿ ಮೇಲುಗೈ ಸಾಧಿಸಿ ಸದನವನ್ನು ತನ್ನ ಸುಪರ್ಧಿಯಲ್ಲಿ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. 100 ಸೆನೆಟ್ ಸದಸ್ಯರು ವಿಜೇತರಾಗಿದ್ದಾರೆ.