ಅಯೋಧ್ಯೆ,ನ.7-ಸಾಂವಿಧಾನಿಕ ಅಥವಾ ಶಾಸನಾತ್ಮಕ ವಿಧಾನದ ಮೂಲಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಬಿಜೆಪಿ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಪಕ್ಷದ ಫೈಜಾಬಾದ್ ಜಿಲ್ಲಾ ಅಧ್ಯಕ್ಷ ಅವಧೇಶ್ ಪಾಂಡೆ ತಿಳಿಸಿದರು.
ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದನ್ನು ಬಹುತೇಕರ ಆಶಯವಾಗಿದ್ದು, ರಾಮಮಂದಿರ ಇದೊಂದು ನಂಬಿಕೆಯ ಪ್ರಶ್ನೆಯಾಗಿದೆ. ಬಿಜೆಪಿಯೊಂದೇ ಜನರಿಗಾಗಿ ಈ ವಿಚಾರವನ್ನು ಪ್ರಸ್ತಾವಿಸುತ್ತಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಸಮುದಾಯಗಳ ನಡುವೆ ಸಂಧಾನಕ್ಕೆ ಆಯ್ಕೆಯೊಂದು ಇತ್ತು ಮತ್ತು ಕೋರ್ಟು ಕೂಡ ಅದಕ್ಕೆ ಅವಕಾಶ ನೀಡಿತ್ತು. ಆದರೆ ಆದು ಫಲಪ್ರದವಾಗಲಿಲ್ಲ ಎಂದವರು ನುಡಿದರು.