ಹೈದರಾಬಾದ್​​ನಲ್ಲಿ ಅಡಗಿದ್ದಾರಾ ಜನಾರ್ಧನ್ ರೆಡ್ಡಿ? ಅಲ್ಲಿಯೂ ಸಿದ್ಧವಾಗಿದೆ ಖೆಡ್ಡಾ

ಬೆಂಗಳೂರುಆ್ಯಂಬಿಂಡೆಂಟ್​ ಚಿಟ್​ಫಂಡ್​ ಹಗರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿಯನ್ನು ಬಂಧಿಸಲು ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ರೆಡ್ಡಿ ಹೈದರಾಬಾದ್​ನಲ್ಲಿ ಅಡಗಿರುವ ಶಂಕೆ ಇದ್ದು, ಅಲ್ಲಿಯೂ ಹುಡುಕಾಟ ಆರಂಭಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್​ ಆಯುಕ್ತರು ಇಂದು ಮಧ್ಯಾಹ್ನ ವಿಶೇಷ ಪತ್ರಿಕಾಗೋಷ್ಠಿ ಕರೆದಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
ರೆಡ್ಡಿ ಅವರನ್ನು ಬಂಧಿಸಲು ಆಂಧ್ರ ಪ್ರದೇಶದಲ್ಲೂ ಖೆಡ್ಡಾ ಸಿದ್ಧ ಮಾಡಲಾಗುತ್ತಿದೆ ಎನ್ನಲಾಗಿದೆ.  ರೆಡ್ಡಿಯ ವಂಚನೆ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರಂತೆ. ಸಾರ್ವತ್ರಿಕ ಚುನಾವಣೆಗೂ ಮುನ್ನ ರೆಡ್ಡಿಗೆ ಖೆಡ್ಡಾ ತೋಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಾಯ್ಡು ಹೀಗೆ ಮಾಡುವುದಕ್ಕೂ ಒಂದು ಕಾರಣವಿದೆ. ಲೋಕಸಭಾ ಚುನಾವಣೆಯಲ್ಲಿ ಜಗನ್ ರೆಡ್ಡಿಗೆ ಜನಾರ್ಧನ್​ ರೆಡ್ಡಿ ಸಹಕಾರ ನೀಡುವ ಭರವಸೆ ಕೊಟ್ಟಿದ್ದಾರಂತೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಚಂದ್ರಬಾಬು ನಾಯ್ಡು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಚಂದ್ರಬಾಬು ನಾಯ್ಡು ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ