ಬೆಂಗಳೂರು, ನ.6-ತಮ್ಮ ಸಹೋದ್ಯೋಗಿಯಿಂದಲೇ ಹಲ್ಲೆಗೊಳಗಾದ ಕೆಪಿಎಸ್‍ಸಿಯ ಹಿರಿಯ ಸಹಾಯಕಿ ಹಾಗೂ ಜಮೇದಾರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಚ್ಚಿನ ಏಟಿನಿಂದ ಗಾಯಗೊಂಡಿರುವ ಈ ಇಬ್ಬರು ಉದ್ಯೋಗಿಗಳ ಹೇಳಿಕೆಯನ್ನು ವಿಧಾನಸೌಧ ಠಾಣೆ ಪೆÇಲೀಸರು ಇನ್ನೂ ಪಡೆದಿಲ್ಲ. ಇವರ ಹೇಳಿಕೆಯನ್ನು ಪಡೆದ ನಂತರವಷ್ಟೆ ಘಟನೆಗೆ ನಿಖರ ಕಾರಣ ತಿಳಿದುಬರಲಿದೆ.
ಕೆಪಿಎಸ್‍ಸಿಯ ಹಿರಿಯ ಸಹಾಯಕಿ ಜಯಲಕ್ಷ್ಮಿ ಹಾಗೂ ಜಮೇದಾರ್ ರಾಮು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಸಂಬಂಧ ಆರೋಪಿ ನಟರಾಜ್‍ನನ್ನು ಪೆÇಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಕೆಲವು ವರ್ಷಗಳಿಂದ ಸಹೋದ್ಯೋಗಿ ಜಯಲಕ್ಷ್ಮಿ ನನ್ನೊಂದಿಗೆ ಸಲುಗೆಯಿಂದಿದ್ದು, ಇತ್ತೀಚೆಗೆ ದೂರವಾಗಿದ್ದರು. ಅಲ್ಲದೆ, ಜಮೇದಾರ್ ರಾಮು ಅವರು ನಮ್ಮಿಬ್ಬರ ಸಲುಗೆ ವಿಷಯವನ್ನು ಇತರ ಸಹೋದ್ಯೋಗಿಗಳಿಗೆ ಹೇಳುತ್ತಿದ್ದರಿಂದ ನನಗೆ ಇರಿಸು-ಮುರಿಸು ಉಂಟಾಗುತ್ತಿತ್ತು ಎಂದು ವಿಚಾರಣೆ ವೇಳೆ ಆರೋಪಿ ನಟರಾಜ್ ಪೆÇಲೀಸರಿಗೆ ಹೇಳಿದ್ದಾನೆ.
ನಿನ್ನೆ ಕೆಪಿಎಸ್‍ಸಿ ಕಚೇರಿಯಲ್ಲಿ ಸಹೋದ್ಯೋಗಿ ನಟರಾಜ್ ಮಚ್ಚಿನಿಂದ ಮೊದಲು ರಾಮು ಮೇಲೆ ಹಲ್ಲೆ ಮಾಡಿದ್ದನು. ಈ ವೇಳೆ ರಾಮು ಚೀರಾಟ ಕೇಳಿ ಜಯಲಕ್ಷ್ಮಿ ಸ್ಥಳಕ್ಕೆ ಬಂದಾಗ ಅವರ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿದ್ದನು. ಈ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.