ಪಶು ಸಂಗೋಪನೆ ಮೂಲಕ ಬದುಕು ಕಟ್ಟಿಕೊಳ್ಳಲು 5,000 ಕುಟುಂಬಗಳಿಗೆ ಹಸುನೀಡಲು ಮುಂದಾದ ತ್ರಿಪುರಾ ಸಿಎಂ

ಅರ್ಗತಲ: ಸ್ವ ಉದ್ಯೋಗ ಆರಂಭಿಸಿ ಆರು ತಿಂಗಳಲ್ಲಿ ಆದಾಯಗಳಿಸಿ ಆರ್ಥಿಕ ಸಬಲರಾಗಲು 5000 ಸಾವಿರ ಕುಟುಂಬಗಳಿಗೆ ಹಸುವನ್ನು ನೀಡುವ ಹೊಸ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್​ ದೇಬ್​ ತಿಳಿಸಿದ್ದಾರೆ.
ಈ ಯೋಜನೆ ಬಡ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗುವುದರ ಜೊತೆಗೆ ಅಪೌಷ್ಟಿಕತೆ ವಿರುದ್ಧ ಹೋರಾಡಲು ಕೂಡ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ನಾನು ದೊಡ್ಡ ಮಟ್ಟದ ಉದ್ಯಮ ಸ್ಥಾಪಿಸಿ ಜನರಿಗೆ ಉದ್ಯೋಗ ನೀಡಬಹುದು. ಆದರೆ, 10 ಕೋಟಿ ರೂ ಬಂಡಾವಳ ಹಾಕಿ 2000 ಜನರಿಗೆ ನೀಡುವ ಬದಲು, 10 ಸಾವಿರ ಹಸುಗಳನ್ನು 5 ಸಾವಿರ ಕುಟುಂಬಗಳಿಗೆ ನೀಡಿದರೆ, ಅವರು ಆರು ತಿಂಗಳಲ್ಲಿ ಹಣ ಸಂಪಾದಿಸುತ್ತಾರೆ ಎಂದು ಹೇಳಿದರು.
ಈ ಹಿಂದೆ ಕೂಡ ಉದ್ಯೋಗ ಬೆಂಬಲಿಸಿ ಹೇಳಿಕೆ ನೀಡಿದ ಅವರು, ಸರ್ಕಾರಿ ಉದ್ಯೋಗಕ್ಕಾಗಿ ಯುವಜನರು ರಾಜಕಾರಣಿಗಳ ಹಿಂದೆ ಅಲೆದಾಡುವ ಬದಲು ಪಾನ್​ ಶಾಪ್​ ತೆರೆದು ಉದ್ಯೋಗ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದರು.
ಸರ್ಕಾರಿ ಉದ್ಯೋಗಕ್ಕಾಗಿ ಓಡುವ ಬದಲು, ಪದವೀಧರರು, ಪಶುಸಂಗೋಪನೆಯಿಂದ 10 ವರ್ಷದಲ್ಲಿ 10 ಲಕ್ಷ ರೂ ಸಂಪಾದಿಸಬಹುದು ಎಂದಿದ್ದಾರೆ.

ಮುಖ್ಯಮಂತ್ರಿ ಗೃಹಕಚೇರಿಯಲ್ಲಿ  ನಮ್ಮ ಕುಟುಂಬ ಕೂಡ ಪಶುಸಂಗೋಪನೆ ಮಾಡಿ ಹಾಲನ್ನು ಉತ್ಪಾದಿಸುವ ಮೂಲಕ ಇತರರಿಗೂ ಉತ್ತೇಜನ ನೀಡುತ್ತೇವೆ ಎಂದು ಅವರು ಹೇಳಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ