ಸಿಯೋಲ್: ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ಸಡಿಲಿಸದಿದ್ದರೆ ಪರಮಾಣು ಪರೀಕ್ಷೆ ಮುಂದುವರಿಸ ಬೇಕಾಗುತ್ತದೆ ಎಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಎಚ್ಚರಿಕೆ ನೀಡಿದ್ದಾರೆ.
ಅಣ್ವಸ್ತ್ರ ಪರೀಕ್ಷೆ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಮೇಲೆ ಅಮೆರಿಕ ನಿರ್ಬಂಧ ಹೇರಿತ್ತು. ಉತ್ತರ ಕೊರಿಯಾದ ಆರ್ಥಿಕತೆ ನೆಲಕಚ್ಚುವ ಸ್ಥಿತಿಗೆ ಬಂತು. ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಪರಮಾಣು ಕಾರ್ಯಕ್ರಮ ಸ್ಥಗಿತಗೊಳಿಸಿ, ಪರೀಕ್ಷಾ ಸ್ಥಳಗಳನ್ನು ನೆಲಸಮ ಮಾಡುವುದಾಗಿ ಹೇಳಿದ್ದರು. ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ಸಡಿಲಿಸದಿದ್ದರೆ ಪರಮಾಣು ಪರೀಕ್ಷೆ ಮುಂದುವರಿಸ ಬೇಕಾಗುತ್ತದೆ ಎಂದು ಕಿಮ್ ಈಗ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ಕಳೆದ ಜೂನ್ನಲ್ಲಿ ಸಿಂಗಾಪುರದಲ್ಲಿ ಭೇಟಿಯಾಗಿ ಐತಿಹಾಸಿಕ ಸಭೆ ನಡೆಸಿದ್ದರು. ಉತ್ತರ ಕೊರಿಯಾ ಮೇಲಿನ ನಿರ್ಬಂಧ ಹಿಂಪಡೆಯುವುದು, ಅಮೆರಿಕ- ದಕ್ಷಿಣ ಕೊರಿಯಾ ಜಂಟಿ ಸಮರಾಭ್ಯಾಸ ಸ್ಥಗಿತಗೊಳಿಸುವುದು, ದಕ್ಷಿಣ ಕೊರಿಯಾದಲ್ಲಿನ ಸೇನೆಯನ್ನು ಅಮೆರಿಕ ವಾಪಸು ಕರೆಯಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆದಿತ್ತು. ಆದರೆ, ಅಮೆರಿಕ ನುಡಿದಂತೆ ನಡೆಯುತ್ತಿಲ್ಲ. ಹೀಗಾಗಿ ಮತ್ತೆ ನಾವು ಹಳೇ ನೀತಿಗೆ ಮರಳಬೇಕಾಗುತ್ತದೆ ಎಂದು ಉತ್ತರ ಕೊರಿಯಾದ ವಿದೇಶಾಂಗ ಸಚಿವಾಲಯ ಹೇಳಿದೆ.
Kim Jong-Un,Noth korean, donald trump