ಮುಸ್ಲಿಂ ಮಹಿಳೆಯರಿಗೆ ನೇಲ್‌ ಪಾಲಿಶ್‌ ನಿಷಿದ್ಧ : ದಾರುಲ್‌ ಫ‌ತ್ವಾ

ಲಕ್ನೋವೈವಿಧ್ಯಮಯ ಫ‌ತ್ವಾ ಗಳನ್ನು ಹೊರಡಿಸುವುದಕ್ಕೆ  ಹೆಸರುವಾಸಿಯಾಗಿ ದಾರುಲ್‌ ಉಲೂಮ್‌ ದೇವಬಂದ್‌ ಇಸ್ಲಾಮಿಕ್‌ ಸೆಮಿನರಿ, ಇದೀಗ ಮುಸ್ಲಿಂ ಮಹಿಳೆಯರು ಉಗುರು ಕತ್ತರಿಸಿಕೊಂಡು ನೇಲ್‌ ಪಾಲಿಶ್‌ ಹಾಕಿಕೊಳ್ಳುವುದನ್ನು ನಿಷೇಧಿಸಿ ಫ‌ತ್ವಾ ಹೊರಡಿಸಿದೆ.

ಹಾಗಿದ್ದರೂ ಮುಸ್ಲಿಂ ಮಹಿಳೆಯರು ತಮ್ಮ ಉಗುರುಗಳಿಗೆ ಮೆಹೆಂದಿ ಹಾಕುವುದನ್ನು ಅದು ಆಕ್ಷೇಪಿಸಿಲ್ಲ.

ಮುಸ್ಲಿಂ ಮಹಿಳೆಯರು ಉಗುರು ಕತ್ತರಿಸಿಕೊಂಡು ನೇಲ್‌ ಪಾಲಿಶ್‌ ಹಾಕಿಕೊಳ್ಳುವುದು ಇಸ್ಲಾಂ ವಿರೋಧಿ ಎಂದು ದಾರುಲ್‌ ಉಲೂಮ್‌ ದೇವಬಂದ್‌ ಹೇಳಿದೆ. ಇದಕ್ಕೆ ಬದಲಾಗಿ ಮುಸ್ಲಿ ಮಹಿಳೆಯರು ತಮ್ಮ ಉಗುರಿನ ಮೇಲೆ ಮೆಹೆಂದಿ ಹಾಕಬಹುದಾಗಿ ಎಂದು ಸ್ಪಷ್ಟಪಡಿಸಿದೆ.

ದಾರುಲ್‌ ಉಲೂಮ್‌ ದೇವಬಂದ್‌ ನ ಸದಸ್ಯರಾಗಿರುವ ಮುಫ್ತಿ ಇಶ್ರಾರ್‌ ಗೌರಾ ಈ ಹೊಸ ಫ‌ತ್ವಾ ವಿವರ ನೀಡಿದ್ದಾರೆ.

ಕಳೆದ ವರ್ಷ ಇದೇ ಸೆಮಿನರಿ ಮುಸ್ಲಿಂ ಮಹಿಳೆಯರು ತಮ್ಮ ಹುಬ್ಬಿನ ಕೂದಲನ್ನು ಕೀಳುವುದು, ಕತ್ತರಿಸಿಕೊಳ್ಳುವುದು, ಶೇಪ್‌ ಮಾಡಿಕೊಳ್ಳುವುದು ಮತ್ತು ತಲೆಕೂದಲು ಕತ್ತರಿಸಿಕೊಳ್ಳುವುದು ಇಸ್ಲಾಂ ವಿರೋಧಿ ಎಂದು ಹೇಳಿ ಇವನ್ನು ನಿಷೇಧಿಸಿ ಫ‌ತ್ವಾ ಹೊರಡಿಸಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ