ಬೆಂಗಳೂರು, ನ.5-ನಮ್ಮವರ ಬಳಗದಿಂದ ಕೊಡಗು ನೆರೆ ಸಂತ್ರಸ್ಥರ ನೆರವಿಗೆ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಗರದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದ ಮೂಲಕ ಭಾರೀ ದೇಣಿಗೆ ಸಂಗ್ರಹಿಸಲಾಯಿತು.
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ರಾಮನ ಕುರಿತಾದ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ಸ್ವಾಮೀಜಿ ಚಾಲನೆ ನೀಡಿದರು.
ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕೊಡಗಿನ ಜನರ ನೆರವಿಗೆ ಆಯೋಜಿಸಿದ್ಧ ಈ ಕಾರ್ಯಕ್ರಮದಲ್ಲಿ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿ ಕೊಡಗಿನವರ ನೆರವಿಗೆ ನಾವಿದ್ದೇವೆ ಎಂಬುದನ್ನು ಮನದಟ್ಟು ಮಾಡೋಣ ಎಂದು ಸ್ವಾಮೀಜಿ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರೇಕ್ಷಕರು ಪರಿಹಾರ ನಿಧಿಗಾಗಿ ಕನಿಷ್ಠ 1 ಸಾವಿರದಿಂದ ದೇಣಿಗೆ ಅರ್ಪಿಸಿದರು.
ಮಾಜಿ ಸಚಿವ ಎಂ.ಕೃಷ್ಣಪ್ಪ, ಮಾಜಿ ಡಿಸಿಎಂ ಆರ್.ಅಶೋಕ್, ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೆ.ಗೋಪಾಲಯ್ಯ, ಮುನಿರತ್ನ, ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ಹಿರಿಯ ನಟಿ ಬಿ.ಸರೋಜಾದೇವಿ, ನಟರಾದ ಯಶ್, ಅನೂಪ್ ಭಂಡಾರಿ, ನಿರ್ದೇಶಕ ನಿರೂಪ್ ಭಂಡಾರಿ ಮತ್ತಿತರರು ಪಾಲ್ಗೊಂಡು ದೇಣಿಗೆ ನೀಡಿದರು.
ಕನ್ನಡದ ಪ್ರಖ್ಯಾತದ ಗಾಯಕರಾದ ಮಂಜುಳಾ ಗುರುರಾಜ್, ಬಿ.ಕೆ.ಸುಮಿತ್ರಾ, ರಾಜೇಶ್ಕೃಷ್ಣನ್, ಹೇಮಂತ್, ಅರ್ಚನಾ ಉಡುಪ, ಶಮಿತಾ ಮಲ್ನಾಡ್, ಆರ್.ಕೆ.ಪದ್ಮನಾಭ ಮತ್ತಿತರರು ಚಲನಚಿತ್ರ ಗೀತೆ ಸೇರಿದಂತೆ ಇನ್ನಿತರ ಜನಪ್ರಿಯ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ವಾಗ್ಮಿ ಪೆÇ್ರ.ಕೃಷ್ಣೇಗೌಡ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.