ಬೆಂಗಳೂರು, ನ.5- ಬಿಬಿಎಂಪಿ ಗುತ್ತಿಗೆಗಾಗಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಪಾಲಿಕೆ ಆಯುಕ್ತರಿಗೆ ಇ-ಮೇಲ್ ಮೂಲಕ ಮನವಿ ಮಾಡಿದ್ದಾರೆ.
ಸರ್ವೋದಯ ಸೇವಾ ಸಂಸ್ಥೆಗೆ ಟೆಂಡರ್ ನೀಡುವಂತೆ ಒತ್ತಾಯಿಸಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಸರ್ವೋದಯ ಸೇವಾ ಸಂಸ್ಥಾನದ ಗುಣಮಟ್ಟದ ಬಗ್ಗೆ ವೆÅಚ್ಚುಗೆ ವ್ಯಕ್ತಪಡಿಸಿರುವ ಸಚಿವರು, ಅನುಭವಿ ಪಶು ವೈದ್ಯರು ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವ ಸಂಸ್ಥೆ, ಬೀದಿ ನಾಯಿಗಳ ಎಬಿಸಿ ಚಿಕಿತ್ಸೆ ಟೆಂಡರ್ ನೀಡುವಂತೆ ಪತ್ರದಲ್ಲಿ ಮನವಿ ಮಾಡುವ ಮೂಲಕ ಬಿಬಿಎಂಪಿ ಗುತ್ತಿಗೆಗೆ ಕೇಂದ್ರ ಸಚಿವರು ಲಾಬಿ ನಡೆಸಿದ್ದಾರೆ.
ಆದರೆ, ಸರ್ವೋದಯ ಸೇವಾ ಸಂಸ್ಥೆ ಕಳಪೆ ಗುಣಮಟ್ಟದಿಂದ ಕೂಡಿದೆ. ನಾಯಿಗಳ ಸಂತಾನಹರಣ ಚಿಕಿತ್ಸೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಎಕ್ಸ್‍ಪೈರಿಡೇಟ್ ಮುಗಿದ ಔಷಧಿಗಳನ್ನು ಈ ಸಂಸ್ಥೆ ನೀಡುತ್ತಿದ್ದು, ಬಿಬಿಎಂಪಿ ಅಧಿಕಾರಿಗಳು ದಾಳಿ ಮಾಡಿ ಈ ಕೃತ್ಯವನ್ನು ಬಯಲು ಮಾಡಿದ್ದರು.
ಈ ಸಂಬಂಧ ಈ ಸಂಸ್ಥೆಗೆ 4 ಲಕ್ಷಕ್ಕೂ ಅಧಿಕ ದಂಡ ವಿಧಿಸಲಾಗಿತ್ತು. ಈ ಸೇವಾ ಸಂಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಇಂತಹ ಸಂಸ್ಥೆಗೆ ಟೆಂಡರ್ ನೀಡುವಂತೆ ಕೇಂದ್ರ ಸಚಿವರು ಇ-ಮೇಲ್ ಮೂಲಕ ಆಯುಕ್ತರಿಗೆ ಶಿಫಾರಸು ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.