ಬೆಂಗಳೂರು, ನ.5- ಪಟಾಕಿಯ ಮೇಲೆ ದೇವರ ಚಿತ್ರವನ್ನು ಹಾಕುವುದರಿಂದ ಅದನ್ನು ಸುಟ್ಟ ಮೇಲೆ ತುಳಿಯುತ್ತಾರೆ. ಅದರಿಂದ ನಮ್ಮ ಸಂಸ್ಕøತಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ವಿಜಯನಗರ ನಿವಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಶಿಕಾಂತ್ ಶರ್ಮ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟಾಕಿ ಮತ್ತು ಬಾಕ್ಸ್‍ಗಳ ಮೇಲೆ ವೆಂಕಟೇಶ್ವರ, ಲಕ್ಷ್ಮಿ, ಗಣೇಶ ಸೇರಿದಂತೆ ಇನ್ನಿತರ ದೇವರ ಫೆÇೀಟೋಗಳನ್ನು ಬಳಕೆ ಮಾಡುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.
ಪಟಾಕಿ ಸಿಡಿದ ನಂತರ ಆ ಚಿತ್ರಗಳು ರಸ್ತೆಯಲ್ಲಿ ಬಿದ್ದಿರುತ್ತವೆ. ಇದು ನಮ್ಮ ಹಿಂದೂ ಧರ್ಮಕ್ಕೆ ಅವಮಾನ ಮಾಡಿದಂತಾಗುತ್ತದೆ. ಆದ್ದರಿಂದ ಪಟಾಕಿಗಳ ಮೇಲೆ ದೇವರ ಚಿತ್ರವನ್ನು ಬಳಕೆ ಮಾಡಬಾರದು ಎಂದು ಒತ್ತಾಯಿಸಿದರು.
ಈಗಾಗಲೇ ಪಟಾಕಿಗಳ ಮೇಲೆ ದೇವರ ಚಿತ್ರಗಳನ್ನು ಪ್ರಿಂಟ್ ಮಾಡಲಾಗಿದೆ. ಆದ್ದರಿಂದ ಮುಂದಿನ ವರ್ಷದಿಂದ ಈ ರೀತಿ ಮಾಡದಂತೆ ನಾವು ತಡೆಯುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಸೇರಿದಂತೆ ಮತ್ತಿತರರು ಇದ್ದರು.