ಇಂದು ಇಂಡೋ- ವಿಂಡೀಸ್ ಟಿ20 ಮೊದಲ ಫೈಟ್

ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಗೆ ಕ್ಷಣಗಣನೆ ಶುರುವಾಗಿದ್ದು ಉಭಯ ತಂಡಗಳ ಮೊದಲ ಚುಟುಕು ಕದನಕ್ಕೆ ಈಡನ್ ಗಾರ್ಡನ್ ಅಂಗಳ ಸಜ್ಜಾಗಿದೆ.
ಈಗಾಗಲೇ ವಿಂಡೀಸ್ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿ ಗೆದ್ದಿರುವ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನ ಮುನ್ನಡೆಸಲಿದ್ದಾರೆ.
ಇತ್ತ ವೆಸ್ಟ್ ಇಂಡೀಸ್ ಆಡಿದ ಎರಡು ಸರಣಿಗಳಲ್ಲು ಸೋಲನ್ನ ಕಂಡಿದ್ದು ಕೊನೆಯ ಸರಣಿಯನ್ನಾದರೂ ಗೆದ್ದು ತವರಿಗೆ ಮರಳುವ ವಿಶ್ವಾಸದಲ್ಲಿದೆ.
ರೋಹಿತ್ ಶರ್ಮಾ ನೇತೃತ್ವದದ ಟೀಂ ಇಂಡಿಯಾದಲ್ಲಿ ಯುವ ಆಟಗಾರರಿಂದ ಕೂಡಿದ ತಂಡವಾಗಿದೆ. ಕನ್ನಡಿಗರಾದ ಕೆ.ಎಲ್. ರಾಹುಲ್ ಮತ್ತು ಮನೀಶ್ ಪಾಂಡೆ ಮತ್ತು ರಿಷಭ್ ಪಂತ್ ಸಿಕ್ಕ ಅವಕಾಶಗಳನ್ನ ಚೆನ್ನಾಗಿ ಬಳಸಿಕೊಳ್ಳಬೆಕಾಗಿದೆ.
ಇತ್ತ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಟಾರ್ ಆಟಗಾರರ ಆಗಮನವಾಗಿದೆ. ಕಿರಾನ್ ಪೊಲಾರ್ಡ್, ದಿನೇಶ್ ರಾಮ್ದಿನ್ ಮತ್ತು ಡೆರೆನ್ ಬ್ರಾವೋ ತಂಡಕ್ಕೆ ಮರಳಿದ್ದಾರೆ. ಎರಡು ವರ್ಷಗಳ ಹಿಂದೆ ಈಡನ್ ಅಂಗಳದಲ್ಲಿ ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ