ಬೆಂಗಳೂರು, ನ.3-ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು ಎಂಬುದನ್ನು ಎಂ.ಪಿ.ರವೀಂದ್ರ ಅವರನ್ನು ನೋಡಿ ಕಲಿಯುವಂತೆ ಜೀವನ ನಡೆಸಿದ್ದರು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಮರಿಸಿದರು.
ಎಂ.ಪಿ.ರವೀಂದ್ರ ಅವರ ಪಾರ್ಥಿವ ಶರೀರ ದರ್ಶನ ಪಡೆದು ನಂತರ ಮಾತನಾಡಿದ ಅವರು, ತಂದೆ ಎಂ.ಪಿ.ಪ್ರಕಾಶ್ ನಿಧನದ ನಂತರ ಅವರ ಸ್ಥಾನವನ್ನುರವೀಂದ್ರ ತುಂಬುತ್ತಾರೆ ಎಂದುಕೊಂಡಿದ್ದೆವು.ಇವರು ಸಹ ಚಿಕ್ಕವಯಸ್ಸಿನಲ್ಲೇ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.
ಶಾಸಕರಾಗಿ, ಐದು ಬಾರಿ ಕೆಎಂಎಫ್ನ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅವರಿಂದ ಕಲಿಯಬೇಕಾದ್ದು ಸಾಕಷ್ಟಿದೆ ಎಂದು ಹೇಳಿದರು.
ಇವರ ಅಗಲಿಕೆಯ ನೋವನ್ನುಭರಿಸುವ ಶಕ್ತಿ ಅವರ ಕುಟುಂಬದವರಿಗೆ ದೇವರು ಕರುಣಿಸಲಿ ಎಂದು ಸಂತಾಪ ಸೂಚಿಸಿದರು.
ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಎಂ.ಪಿ.ರವೀಂದ್ರ ಅಗಲಿಕೆ ತಮಗೆ ತುಂಬ ನೋವು ತಂದಿದೆ. ನನ್ನ ಆತ್ಮೀಯ ಸ್ನೇಹಿತರಾಗಿದ್ದ ರವೀಂದ್ರ ಅವರ ಅಕಾಲಿಕ ನಿಧನದಿಂದ ಹೆಚ್ಚಿನ ನೋವುಂಟಾಗಿದೆ ಎಂದರು.