
ಬೆಂಗಳೂರು, ನ.3- ಎಂ.ಪಿ.ರವೀಂದ್ರ ಅವರ ಅಗಲಿಕೆಯಿಂದ ನಮಗೆ ನಮ್ಮ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ರವೀಂದ್ರಅವರ ಪಾರ್ಥಿವ ಶರೀರಕ್ಕೆ ಅಂತಿಮ ದರ್ಶನದ ನಂತರ ಅವರು ಮಾತನಾಡಿದರು. ಮಗುವಿನಂತಹ ಸ್ವಭಾವ ಹೊಂದಿದ್ದ ರವೀಂದ್ರ ಸ್ನೇಹ ಜೀವಿ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪ ಬಾರದಿತ್ತು.
ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದು ಬಂದ ನಂತರ ಅವರು ಚೇತರಿಸಿಕೊಂಡಿದ್ದರು. ಅವರ ಈ ಅಕಾಲಿಕ ನಿಧನದ ದುಃಖ ಭರಿಸುವ ಶಕ್ತಿಯನ್ನು ಅವರ ತಾಯಿ ಹಾಗೂ ಕುಟುಂಬದವರಿಗೆ ದೇವರು ಕರುಣಿಸಲಿ ಎಂದರು.
ಇದೇ ವೇಳೆ ಕುಟುಂಬದವರಿಗೆ ಸಿಎಂ ಸಾಂತ್ವನ ಹೇಳಿದಾಗ ರವೀಂದ್ರ ಅವರ ತಾಯಿ ರುದ್ರಾಂಬ ಅವರು ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಎಂಬ ಸಲಹೆ ನೀಡಿದರು.
ನಮಗೆಲ್ಲಾ ಹಳೆ ನೆನಪುಗಳಿವೆ. ನಿಮ್ಮನ್ನು ಮೊದಲಿನಿಂದ ನೋಡಿದ್ದೇನೆ. ಸಮಾಜದ ಒಳಿತಿಗೆ ಉತ್ತಮ ಕೆಲಸ ಮಾಡುತ್ತಿದ್ದೀರಿ. ಆರೋಗ್ಯ ನಿರ್ಲಕ್ಷಿಸಬೇಡಿ ಎಂದು ಹೇಳಿದರು.
ನನ್ನ ಕಷ್ಟ ಯಾವ ತಾಯಿಗೂ ಬರುವುದು ಬೇಡ ಎಂದು ನೊಂದು ಕಂಬನಿ ಹಾಕಿದರು.