ನವದೆಹಲಿ: ಮುಂದಿನ ಪ್ರಧಾನಿಯ ಕುರಿತಾಗಿ ಖ್ಯಾತ ವೆಬ್ಸೈಟ್ ಡೈಲಿಹಂಟ್ ಹಾಗೂ ನೀಲ್ಸನ್ ಇಂಡಿಯಾ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿ ಮೋದಿ ಮತ್ತೆ ಪ್ರಧಾನಿ ಗಾದಿಯನ್ನು ಏರಬೇಕೆಂದು ಶೇ.63ರಷ್ಟು ಮಂದಿ ಆಶಯ ವ್ಯಕ್ತಪಡಿಸಿದ್ದಾರೆ.
54 ಲಕ್ಷಕ್ಕೂ ಅಧಿಕ ಮಂದಿ ಈ ಸರ್ವೇಯಲ್ಲಿ ಭಾಗವಹಿಸಿದ್ದು, ಶೇ. 50ಕ್ಕೂ ಹೆಚ್ಚಿನ ಮಂದಿ ಮೋದಿ ಮತ್ತೆ ಪ್ರಧಾನಿಯಾದರೆ ಭಾರತ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶೇ. 63ರಷ್ಟು ಮಂದಿ ಮೋದಿಯನ್ನು ಮತ್ತೆ ಪ್ರಧಾನಿ ಪಟ್ಟದಲ್ಲಿ ನೋಡಬೇಕೆಂದಿದ್ದು, ಮೋದಿ ನಾಯಕತ್ವ ಹಾಗೂ ನಾಲ್ಕು ವರ್ಷದ ಅಭಿವೃದ್ಧಿ ಕಾರ್ಯ ತೃಪ್ತಿಕರವಾಗಿದೆ ಎಂದಿದ್ದಾರೆ.
ಈ ಸಮೀಕ್ಷೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷ, ಇದೊಂದು ವ್ಯರ್ಥ ಹಾಗೂ ಸುಳ್ಳು ಸರ್ವೇ ಎಂಬ ಅಭಿಪ್ರಾಯ ತಿಳಿಸಿದೆ.