ಲಯನ್​ ಏರ್​ ಜೆಟ್​ ಪತನವಾಗುವ ಹಿಂದಿನ ದಿನವೇ ಸಿಕ್ಕಿತ್ತು ಸೂಚನೆ!

ಜಕಾರ್ತ: ಇಂಡೋನೆಷ್ಯಾದ ರಾಜಧಾನಿ ಜಕಾರ್ತದಿಂದ ಪಾಂಗ್​ ಕಲ್​ ಪಿನಾಗ್ ದ್ವೀಪಕ್ಕೆ ಹೊರಟಿದ್ದ ಲಯನ್​ ಏರ್​ ಜೆಟ್​ ಭಾನುವಾರ ಪತನಗೊಂಡಿತ್ತು. ಈ ವಿಮಾನದಲ್ಲಿದ್ದ 189 ಮಂದಿ ಮೃತಪಟ್ಟಿದ್ದರು. ಈ ಅಪಘಾತ ನಡೆಯುವ ಹಿಂದಿನ ದಿನವೇ ವಿಮಾನದಲ್ಲಿ ತಾಂತ್ರಿಕ ತೊಂದರೆ ಇರುವ ವಿಚಾರ ಗೊತ್ತಾಗಿತ್ತಂತೆ!
ಬೋಯಿಂಗ್​ 737 ಮ್ಯಾಕ್ಸ್​ ವಿಮಾನ ಭಾನುವಾರ ಇಂಡೋನೆಷ್ಯಾದ ಬಾಲಿಯಿಂದ ಜಕಾರ್ತಕ್ಕೆ ಹೊರಟಿತ್ತು. ಹಾರಾಟದ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಪೈಲೆಟ್​ ಸೂಚನೆ ನೀಡಿದ್ದ. ತಕ್ಷಣಕ್ಕೆ ವಾಪಾಸಾಗುವಂತೆ ಅಧಿಕಾರಿಗಳು ಪೈಲಟ್​ಗೆ ಕೋರಿದ್ದರು. ಆದರೆ, ‘ತಾಂತ್ರಿಕ ತೊಂದರೆ ಬಗೆಹರಿದಿದೆ. ನಾವು ಜಕಾರ್ತಕ್ಕೆ ತೆರಳುತ್ತಿದ್ದೇವೆ’ ಎನ್ನುವ ಸಂದೇಶ ಪೈಲಟ್​ನಿಂದ ಬಂದಿತ್ತು. ಅದೃಷ್ಟವಶಾತ್​ ವಿಮಾನ ಜಕಾರ್ತದಲ್ಲಿ ಯಶಸ್ವಿಯಾಗಿ ಲ್ಯಾಂಡ್​ ಆಗಿತ್ತು.

ಸೋಮವಾರ ಅಂದರೆ ಅಕ್ಟೋಬರ್​ 29ರ ಬೆಳಗ್ಗೆ ಇದೇ ವಿಮಾನ ಪಾಂಗ್​ ಕಲ್​ ಪಿನಾಗ್​ಗೆ ಪ್ರಯಾಣ ಬೆಳೆಸಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಟೇಕ್​ಆಫ್​ ಆದ ಕೇವಲ 15 ನಿಮಿಷಗಳಲ್ಲಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ 189 ಮಂದಿ ಮೃತಪಟ್ಟಿದ್ದಾರೆ. ವಿಮಾನದಲ್ಲಿ ತಾಂತ್ರಿಕ ತೊಂದರೆ ಇರುವ ವಿಚಾರ ಗೊತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ ತೋರಿದರೇ ಎನ್ನುವ ಅನುಮಾನ ಎದುರಾಗಿದೆ.
ಅಂದಹಾಗೆ, ಈ ವಿಮಾನದ ಪೈಲಟ್ ಭಾರತೀಯ ಮೂಲದ ಭಾವೇ ಸುನ್ಯೆಜ್ ಎಂದು ಗುರುತಿಸಲಾಗಿದೆ. ಭಾವೇ ಸುನ್ಯೆಜ್ ನವದೆಹಲಿ ಮೂಲದವರಾಗಿದ್ದು, ಇಲ್ಲಿಯ ಮಯೂರ ವಿಹಾರನ ಅಹಲ್ಕಾನ್  ಪಬ್ಲಿಕ್ ಸ್ಕೂಲ್​ನಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದರು. ಇವರು ಮಾರ್ಚ್​ 2011 ರಿಂದ ಲಯನ್ ಏರ್​ಲೈನ್ಸ್​ ಗೆ ಕ್ಯಾಪ್ಟನ್ ಸೇವೆ ಸಲ್ಲಿಸುತ್ತಿದ್ದರು

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ