ಫ್ಲಿಪ್‌ಕಾರ್ಟ್‌ ದೀಪಾವಳಿ ಧಮಾಕ ಶುರು

ಹೊಸದಿಲ್ಲಿ: ನವರಾತ್ರಿ ಧಮಾಕ ಮುಗಿಯುತ್ತಿದ್ದಂತೆ ಕೊಂಚವೂ ಸಮಯ ವ್ಯರ್ಥ ಮಾಡದ ಫ್ಲಿಪ್‌ಕಾರ್ಟ್‌ ದೀಪಾವಳಿ ರಿಯಾಯಿತಿ ಮಾರಾಟವನ್ನು ಶುರು ಮಾಡಿದೆ. ಬುಧವಾರ ಮಧ್ಯರಾತ್ರಿಯಿಂದಲೇ ಮಾರಾಟ ಭರಾಟೆ ಶುರುವಾಗಿದ್ದು ನವೆಂಬರ್‌ 5ರ ವರೆಗೂ ಡಿಸ್ಕೌಂಟ್‌ ಸೇಲ್‌ ಹವಾ ಇರಲಿದೆ. ಸ್ಮಾರ್ಟ್‌ಪೋನ್‌ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಇರಲಿದೆ.

ಫ್ಲಿಪ್‌ಕಾರ್ಟ್‌, ಎಸ್‌ಬಿಐ ಜತೆ ಸಹಯೋಗ ಹೊಂದಿದ್ದು, ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರು ಪ್ರತಿ ಖರೀದಿಯಲ್ಲಿ ಹೆಚ್ಚಿನ ರಿಯಾಯಿತಿಯನ್ನು ಪಡೆಯಲಿದ್ದಾರೆ. ಇದರೊಂದಿಗೆ ಹಣ ಪಾವತಿಗೆ ಡೆಬಿಟ್‌ಕಾರ್ಡ, ಫೋನ್‌ಪೇ, ಬಜಾಜ್‌ ಫೈನಾನ್ಸ್‌ ಸರ್ವೀಸ್‌, ಇಎಂಐ ಸಾಧನಗಳನ್ನು ಬಳಸಬಹುದು.

ಕೆಲವೊಂದು ಆಯ್ದ ಮೊಬೈಲ್‌ ಖರೀದಿಗೆ ಬೈ ಬ್ಯಾಕ್‌ ಗ್ಯಾರಂಟಿ ಹಾಗೂ ಸಂಪೂರ್ಣ ಸುರಕ್ಷತೆ ಖಾತ್ರಿಯನ್ನು ಒದಗಿಸಲಾಗಿದೆ. ಹೊಸ ರೀಲ್‌ಮಿ 2 ಪ್ರೊ ಮೊಬೈಲ್‌ 13, 990 ರೂ.ಗಳಿಗೆ ಲಭ್ಯವಿದೆ. ರೆಡ್‌ಮಿ ನೋಟ್‌ 5 ದರವನ್ನು ಇತ್ತೀಚೆಗಷ್ಟೇ 12,999ಕ್ಕೆ ಇಳಿಸಲಾಗಿದ್ದು ಇದು ಗ್ರಾಹಕರಿಗೆ ಲಭ್ಯವಿದೆ.

3ಜಿ ರ‍್ಯಾಮ್ ಹಾಗೂ 32 ಜಿಬಿ ಮಾಡೆಲ್‌ನ ಹಾನರ್‌ 9ಎನ್‌ ಅನ್ನು 9, 999 ರೂ ಗಳಿಗೆ ಮಾರಾಟವಾಗುವ ನಿರೀಕ್ಷೆ ಇದೆ. ಇದರ ಅಸಲಿ ಬೆಲೆ 13, 999. ರೂ. ಭಾರಿ ಇಳಿಕೆ ಮಾಡಲಾಗುತ್ತದೆ ಎಂದು ಫ್ಲಿಪ್‌ಕಾರ್ಟ್‌ ಹೇಳಿದೆ.

ಟಿವಿ ಹಾಗೂ ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲಿ ಶೇ. 75ರಷ್ಟು ಡಿಸ್ಕೌಂಟ್‌ ಇರುತ್ತದೆ ಎಂದು ಹೇಳಿದ್ದು ಗ್ರಾಹಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ