ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಕೈನೋವಿನಿಂದ ಬಳಲುತ್ತಿದ್ದು ವಿಂಡೀಸ್ ವಿರುದ್ಧ ಇಂದು ನಡೆಯಲಿರುವ ಏಕದಿನ ಪಂದ್ಯದಲ್ಲಿ ಆಡೋದು ಅನುಮಾನದಿಂದ ಕೂಡಿದೆ.
ಎಂ.ಎಸ್.ಧೋನಿ ನಿನ್ನೆ ತಂಡದೊಂದಿಗೆ ತಿರುವನಂತಪುರಂಗೆ ಬರುವ ವೇಳೆ ಎಡಗೈಗೆ ಬ್ಯಾಂಡೇಜ್ ಸುತ್ತಿಕೊಂಡಿದ್ದರು. ಇದು ಧೋನಿ ಗಾಯಗೊಂಡಿದ್ದಾರೆ ಅನ್ನೋದು ಎದ್ದು ಕಾಣುತ್ತಿದೆ.
ಮಿಸ್ಟರ್ ಕೂಲ್ ಧೋನಿ ವಿಂಡೀಸ್ ವಿರುದ್ಧ ಇಂದು ಒಂದು ರನ್ ಗಳಿಸಿದ್ರೆ ಏಕದಿನ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ ಸಾದನೆ ಮಾಡಲಿದ್ದಾರೆ. ಧೋನಿ ಇಂದು ವಿಂಡೀಸ್ ವಿರುದ್ಧ ಆಡದಿದ್ದರೆ ಹತ್ತು ಸಾವಿರ ರನ್ ಮೈಲುಗಲ್ಲು ಮುಟ್ಟಲು ಆಸ್ಟ್ರೇಲಿಯಾ ವಿರುದ್ಧ ಜನವರಿಯಲ್ಲಿ ನಡೆಯಲಿರುವ ಏಕದಿನ ಸರಣಿವರೆಗೂ ಕಾಯಬೇಕಾಗುತ್ತದೆ.