ಬೆಂಗಳೂರು,ನ.1-ಹಂಗರ್ ಬಾಕ್ಸ್,ಟಂಗ್ಸ್ಟನ್ ಫುಡ್ ನೆಟ್ವರ್ಕ್ ಫೈ.ಲಿ ಮತ್ತು ಸ್ವಿಗ್ಲಿ ಪುಡಪಾಂಡ ಈ ಕಂಪನಿಗಳು ಕ್ಯಾಟರಿಂಗ್ನಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಆಹಾರ ಸೇವಕರ ಕಲ್ಯಾಣ ಸಂಘ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಜಿ.ಕೆ.ಗಿರೀಶ್ ಉಪ್ಪಾರ್ ಮಾತನಾಡಿ, ಕ್ಯಾಟರಿಂಗ್ ಸರ್ವೀಸ್ ಎಂಬುದು ಒಂದು ರಿಯಾಯಿತಿ ದರದಲ್ಲಿ ಗ್ರಾಹಕರ ಬಳಿಯೇ ಅವರಿಗೆ ಆಹಾರ, ತಿಂಡಿ ಒದಗಿಸುವ ಸೇವೆಯಾಗಿದೆ. ಆದರೆ ಹಲವಾರು ಕಂಪನಿಗಳಿಗೆ ಕ್ಯಾಟರಿಂಗ್ ಸೇವೆ ಒದಗಿಸುತ್ತಿರುವ ಹಲವಾರು ಸದಸ್ಯರಿಂದ ತಮ್ಮ ಕಂಪನಿಗೆ ಕ್ಯಾಟರಿಂಗ್ ಒದಗಿಸಲು 15-20% ಕಮಿಷನ್ ಪಡೆಯುತ್ತಿವೆ. ಇದನ್ನು ಪ್ರಶ್ನಿಸಿದಲ್ಲಿ ಅವರನ್ನು ಕ್ಯಾಟರಿಂಗ್ ಸೇವೆಯಿಂದ ವಜಾ ಮಾಡಲಾಗುತ್ತದೆ ಎಂದರು.
ನಮ್ಮ ಕನ್ನಡಿಗರನ್ನು ಹೊರತುಪಡಿಸಿ ಬೇರೆ ಭಾಷೆ, ರಾಜ್ಯದವರಿಗೆ ಸದರಿ ಕ್ಯಾಟರಿಂಗ್ ಸೇವೆಯನ್ನು ನೀಡಲಾಗುತ್ತದೆ. ಇದರಿಂದಾಗಿ ಕ್ಯಾಟರಿಂಗ್ಸೇವಾದಾರರಿಗೆ ಸರಿಯಾಗಿ ಆದಾಯ ಇಲ್ಲದೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಲುಪಿದ್ದಾರೆ. ಆದ್ದರಿಂದ ಈ ಮೊದಲು ಕಂಪನಿಗಳಿಗೆ ನೀಡುತ್ತಿದ್ದ ಕ್ಯಾಟರಿಂಗ್ ಸೇವೆಯ ನಿಬಂಧನೆಗಳಂತೆಯೇ ಇನ್ನು ಮುಂದೆ ಆ್ಯಪ್ ಕಂಪನಿಗಳ ಮಧ್ಯಸ್ಥಿಕೆ ಇಲ್ಲದಂತೆ ಅವರಿಗೆ ಕಮಿಷನ್ ನೀಡದೆ ನಮ್ಮ ಸದಸ್ಯರಿಗೆ ಸೇವೆ ಒದಗಿಸಬೆಕೆಂದು ಕಂಪನಿಗಳಿಗೆ ಮನವಿ ಮಾಡಿದರು.
ಇದಕ್ಕೆ ತಪ್ಪಿದಲ್ಲಿ ಸದರಿ ಕಂಪನಿಗಳ ಮುಂದೆ ನಮ್ಮ ಕ್ಯಾಟರಿಂಗ್ ಸೇವಾದಾರರು ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.