ತಿರುವನಂತಪುರಂ : ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದನೇ ಏಕದಿನ ಮತ್ತು ಕೊನೆಯ ಏಕದಿನ ಪಂದ್ಯ ದೇವರ ನಾಡು ತಿರುವನಂತಪುರಂನಲ್ಲಿ ನಡೆಯಲಿದೆ.
ಸರಣಿಯಲ್ಲಿ ಈಗಾಗಲೇ 2-1 ಅಂತರದಿಂದ ಮುನ್ನಡೆ ಪಡೆದಿರುವ ಕೊಹ್ಲಿ ಪಡೆ ಇಂದು ವಿಂಡೀಸ್ ವಿರುದ್ಧ ಗೆಲ್ಲುವ ಫೇವರಿಟ್ ತಂಡ ಎನಿಸಿದೆ. ಆದರೂ ವಿಂಡೀಸ್ ತಂಡ ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿರೋದ್ರಿಂದ ಕೊಹ್ಲಿ ಪಡೆ ಸ್ವಲ್ಪ ಎಚ್ಚರ ತಪ್ಪಿದ್ರು ಸರಣಿ ಗೆಲ್ಲುವ ಕನಸಿಗೆ ನುಚ್ಚು ನೂರಾಗಲಿದೆ.
ಮೊನ್ನೆ ಬ್ರೇರ್ನ್ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದೆ. ಬ್ಯಾಟಿಂಗ್ನಲ್ಲಿ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಹೊರತುಪಡಿಸಿ ತಂಡದ ಬ್ಯಾಟಿಂಗ್ ಲೈನ್ಅಪ್ ಬಲಿಷ್ಠವಾಗಿದೆ. ಕ್ಯಾಪ್ಟನ್ ಕೊಹ್ಲಿ ರೋಹಿತ್ ಶರ್ಮಾರಿಂದ ಮತ್ತೊಂದು ಜುಗಲ್ಬಂದಿಯನ್ನ ನಿರೀಕ್ಷಿಸಲಾಗಿದೆ. ಇನ್ನು ತಂಡದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಇನ್ನು ಒಂದು ರನ್ ಗಳಿಸಿದ್ರೆ ಏಕದಿನ ಕ್ರಿಕೆಟ್ನಲ್ಲಿ ತಂಡದ ಪರ ಹತ್ತು ಸಾವಿರ ರನ್ ಪೂರೈಸಿದ ಸಾಧೆನೆ ಮಾಡಲಿದ್ದಾರೆ.
ಇನ್ನು ವೆಸ್ಟ್ಇಂಡೀಸ್ ತಂಡ ಗೆಲ್ಲಲು ತಂಡದ ಬ್ಯಾಟ್ಸ್ಮನ್ಗಳನ್ನ ನೆಚ್ಚಿಕೊಂಡಿದೆ. ತಂಡದ ಪ್ರಮುಖ ಬ್ಯಾಟ್ಸ್ಮನ್ಗಳಾದ ಶಾಯಿ ಹೋಪ್ ಮತ್ತು ಶಿಮ್ರಾನ್ ಹೇಟ್ಮರ್ ಸಿಡಿದೆದ್ರೆ ತಂಡಕ್ಕೆ ಬಿಗ್ ಸ್ಕೋರ್ ಪಕ್ಕಾ.
ಆದರೆ ಓಪನರ್ಗಳಾದ ಹೇಮರಾಜ್, ಕಿರಾನ್ ಪೊವೆಲ್ ಮಧ್ಯಮ ಕ್ರಮಾಂಕದಲ್ಲಿ ಮರ್ಲನ್ ಸ್ಯಾಮ್ಯುವೆಲ್ಸ್ ಮತ್ತು ರೊವ್ಮನ್ ಸಿಡಿಯುತ್ತಿಲ್ಲ. ಇನ್ನು ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ಕೆಮರ್ ರೋಚ್, ಅಲೆನ್ ಪೊವೆಲ್ ಬೌಲಿಂಗ್ ನಲ್ಲಿ ಹೇಳಿಕೊಳ್ಳುವಂತ ಪರ್ಫಾಮನ್ಸ್ ಕೊಟ್ಟಿಲ್ಲ.