ಬೆಂಗಳೂರು, ಅ.31- ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ನ.2ರಿಂದ 4ನೇ ಅಖಿಲಭಾರತ ಅಂತರ ವಿವಿಗಳ ಮಹಿಳಾ ಚಾಂಪಿಯನ್ಶಿಪ್ ಏರ್ಪಡಿಸಲಾಗಿದೆ.
ನಗರದ ಬಸವನಗುಡಿಯ ಆಕ್ವಾಟಿಕ್ ಸೆಂಟರ್ನಲ್ಲಿ ಚಾಂಪಿಯನ್ಶಿಪ್ ನಡೆಯಲಿದೆ ಎಂದು ಪ್ರಾಚಾರ್ಯ ಡಾ.ಎಂ.ಯು.ಅಶ್ವಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವಿಮಿಂಗ್ ವಾಟರ್ ಪೆÇಲೋ ಪಂದ್ಯಾವಳಿ ಸೇರಿದಂತೆ 100ಕ್ಕೂ ಹೆಚ್ಚು ಪಂದ್ಯಾವಳಿಗಳು ನಡೆಯಲಿದ್ದು, ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸ್ಪರ್ಧೆಗಳನ್ನು ನಡೆಸಲಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಡಿಸಿಎಂ ಡಾ.ಜಿ.ಪರಮೇಶ್ವರ್, ಎನ್ಎಪಿಇಎಸ್ಎಸ್ನ ಅಧ್ಯಕ್ಷ ಚನ್ನಪ್ಪ ರೆಡ್ಡಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ನ. 3ರಂದು ಸಿ.ಎಂ.ಅರ್ ವಿಶ್ವವಿದ್ಯಾನಿಲಯದ 3ನೇ ಶೈಕ್ಷಣಿಕ ಘಟಿಕೋತ್ಸವ:
ಬೆಂಗಳೂರು,ಅ.31- ಸಿಎಂಆರ್ ವಿಶ್ವವಿದ್ಯಾನಿಲಯದ 3ನೇ ಶೈಕ್ಷಣಿಕ ಘಟಿಕೋತ್ಸವ ನ.3ರಂದು ವಿವಿ ಕ್ಯಾಂಪಸ್ನ ಧ್ವನಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಉಪಕುಲಪತಿ ಎಂ.ಎಸ್.ಶಿವಕುಮಾರ್ ತಿಳಿಸಿದರು.
ಘಟಿಕೋತ್ಸವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಭಾಗವಹಿಸಲಿದ್ದು, ಜನಪ್ರಿಯ ವೈದ್ಯಕೀಯ ತಜ್ಞ ಕೆ.ಎನ್.ದೈವಜ್ಞ ಅವರಿಗೆ ಸನ್ಮಾನಿಸಲಾಗುವುದು ಎಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಪಿಎಚ್ಡಿ,ಎಂಬಿಎ, ಎಂಎಸ್ಸಿ, ಎಂಎಸ್ಡಬ್ಲು ಸೇರಿದಂತೆ ವಿವಿಧ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಘಟಿಕೋತ್ಸವದಂದು ಪದವಿ ಪ್ರದಾನ ಮಾಡಲಾಗುತ್ತಿದೆ.
ಈ ಬಾರಿ ವಿವಿಯ 16 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿದ್ದಾರೆ ಎಂದು ಹೇಳಿದರು.