ಮೇಯರ್ ಅವರು ಕರೆದ ಮೊದಲ ಸಭೆಗೆ ಬಿಬಿಎಂಪಿ ಸದಸ್ಯರ ನಿರಾಸಕ್ತಿ

ಬೆಂಗಳೂರು, ಅ.31- ಗಂಗಾಂಬಿಕೆ ಅವರು ಮೇಯರ್ ಆದ ಮೊದಲ ಸಭೆಗೆ ಬಿಬಿಎಂಪಿ ಸದಸ್ಯರು ನಿರಾಸಕ್ತಿ ತೋರಿದ್ದಾರೆ.
ಮೊನ್ನೆ ಸಭೆ ಪ್ರಾರಂಭವಾದರೂ ಉಪಮೇಯರ್ ರಮಿಳಾ ಉಮಾಶಂಕರ್ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿ ಇಂದಿಗೆ ಸಭೆ ಮುಂದೂಡಲಾಗಿತ್ತು. ಹಾಗಾಗಿ ಇಂದು ಮೊದಲ ಸಭೆಯಾಗಿದೆ.

ಇಂದಿರಾ ಕ್ಯಾಂಟಿನ್ ಊಟಕ್ಕೆ ಹೆದರಿ ಕಾಪೆರ್Çರೇಟರ್‍ಗಳು ಗೈರಾಗಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ.ಮೊನ್ನೆ ಇಂದಿರಾ ಕ್ಯಾಂಟಿನ್‍ನಿಂದ 500 ಊಟ ತರಿಸಲಾಗಿತ್ತು.ಅದರಲ್ಲಿ ಖರ್ಚಾಗಿದ್ದದ್ದು 200 ಮಾತ್ರ.ಇಂದು ಕೂಡ 500 ಊಟ ತರಿಸಲಾಗಿದೆ. ಆದರೆ, 198 ಸದಸ್ಯರ ಪೈಕಿ ಪ್ರಾರಂಭದಲ್ಲಿ 21 ಮಂದಿ ಕಾಂಗ್ರೆಸ್ ಸದಸ್ಯರು, ಜೆಡಿಎಸ್‍ನ ಮೂವರು, 21 ಮಂದಿ ಬಿಜೆಪಿ, ಪಕ್ಷೇತರರು ಮೂರು ಮಂದಿ ಭಾಗವಹಿಸಿದ್ದರು. ಹಾಗಾಗಿ ಇಂದು ಕೂಡ ಊಟ ವೇಸ್ಟ್ ಆಗುವುದು ಗ್ಯಾರಂಟಿ.

ಕೌನ್ಸಿಲ್ ಸಭೆಯಲ್ಲಿ ಇಂದಿರಾ ಕ್ಯಾಂಟಿನ್ ಊಟ ಕಡ್ಡಾಯದ ಹಿನ್ನೆಲೆಯಲ್ಲಿ ಸದಸ್ಯರು ಹಾಜರಾಗಲು ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ.
ರೆವಿನ್ಯೂ ನಿವೇಶನಗಳಿಗೆ ಖಾತಾ ಮಾಡಿಕೊಡಿ: ಸಭೆ ಪ್ರಾರಂಭವಾದಾಗ ಬಿಜೆಪಿ ಸದಸ್ಯ ಕಟ್ಟೆ ಸತ್ಯನಾರಾಯಣ ಕಂದಾಯದ ಬಗ್ಗೆ ಪ್ರಸ್ತಾಪಿಸಿ ರೆವಿನ್ಯೂ ನಿವೇಶನಗಳಿಗೆ ಖಾತಾ ಮಾಡಿಕೊಡುವಂತೆ ತಿಳಿಸಲಾಗಿತ್ತು. ಕೆಲವರು ಕೋರ್ಟ್‍ಗೆ ಹೋಗಿದ್ದರಿಂದ ಬಿ ಖಾತಾ ಮಾಡಿಕೊಡುವುದಾಗಿ ಹೇಳಿದ್ದರು.ಆನಂತರ ಯಾವುದೇ ಅಧಿಕಾರಿಗಳು ಫಾಲೋಅಪ್ ಮಾಡಲಿಲ್ಲ. ಈಗಲಾದರೂ ಈ ರೀತಿ ತೆರಿಗೆ ಸಂಗ್ರಹ ಮಾಡುವುದರಿಂದ ಪಾಲಿಕೆ ಬೊಕ್ಕಸ ತುಂಬಲಿದೆ ಎಂದು ಸಲಹೆ ನೀಡಿದರು.

ಸದಸ್ಯ ಉಮೇಶ್‍ಶೆಟ್ಟಿ ಮಾತನಾಡಿ, ಮೇಯರ್ ಆದವರಿಗೆ ಮಳೆ, ಕಸದ ಸಮಸ್ಯೆ ಸ್ವಾಗತ ಮಾಡುತ್ತಿತ್ತು.ಆದರೆ, ಈಗ ಕೋರ್ಟ್ ಸ್ವಾಗತ ಮಾಡುತ್ತಿದೆ.ಅಧಿಕಾರಿಗಳು ಕೆಲಸ ಮಾಡದಿರುವುದರಿಂದ ನಾವು ಹೊಣೆಯಾಗಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲಿ ಹೋದರೂ ರಸ್ತೆ ಗುಂಡಿಗಳದ್ದೇ ಮಾತು ಕೇಳಿಬರುತ್ತಿದೆ.ಸದಸ್ಯರಿಗೆಲ್ಲ ಕೆಟ್ಟ ಹೆಸರು ಬರುತ್ತದೆ.ಹಾಗಾಗಿ ಆಯುಕ್ತರ ಮುಖಾಂತರ ಬಂದು ಸ್ಪಷ್ಟನೆಯನ್ನು ಕೋರ್ಟ್‍ಗೆ ನೀಡಬೇಕೆಂದು ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ