ಗಂಡು ಮಗುವಿಗೆ ಜನ್ಮ ನೀಡಿದ ಸಾನಿಯಾ ಮಿರ್ಜಾ

ಭಾರತದ ಅಗ್ರ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸ್ವತಃ ಪತಿ ಹಾಗೂ ಪಾಕ್ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಘೋಷಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಶೊಯೆಬ್ ತುಂಬ ಸಂತಸದಿಂದ ಹೇಳುತ್ತಿದ್ದೇನೆ, ನನಗೆ ಗಂಡು ಮಗು ಹುಟ್ಟಿದೆ. ನಿಮ್ಮಲ್ಲರ ಪ್ರೀತಿ ಹಾರೈಕೆಗಳಿಗೆ ಧನ್ಯವಾಗಳು ಎಂದು ತಿಳಿಸಿದ್ದಾರೆ.
ಸಾನಿಯಾ ಮಿರ್ಜಾ ಕಳೆದ ಕೆಲವು ತಿಂಗಳಿನಿಂದ ಟೆನ್ನಿಸ್‍ನಿಂದ ದೂರವಿದ್ದರು. ಶೋಯೆಬ್ ಮಲ್ಲಿಕ್ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಆಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ