ವಿಧಾನ ಪರಿಷತ್ನ ಮೂರು ನಾಮನಿರ್ದೇಶಿತ ಸ್ಥಾನಗಳಿಗೆ ರಾಜ್ಯಪಾಲರಿಂದ ನೇಮಕ

ಬೆಂಗಳೂರು, ಅ.30- ವಿಧಾನ ಪರಿಷತ್‍ನ ಮೂರು ನಾಮನಿರ್ದೇಶಿತ ಸ್ಥಾನಗಳ ಪೈಕಿ ಕಾಂಗ್ರೆಸ್ ಪಾಲಿನ ಎರಡು ಸ್ಥಾನಗಳಿಗೆ ಯು.ಬಿ. ವೆಂಕಟೇಶ್ ಮತ್ತು ಪ್ರಕಾಶ ರಾಥೋಡ್ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಆಂಗ್ಲೋ ಇಂಡಿಯನ್ ಸದಸ್ಯರಾಗಿ ವಿನಿಶಾ ನೇರೋ ಅವರನ್ನು ಕೂಡ ನೇಮಕ ಮಾಡಲಾಗಿದೆ. ಸಮಾಜದಲ್ಲಿ ಸೇವೆ ವಿಭಾಗದಲ್ಲಿ ಯು.ಬಿ.ವೆಂಕಟೇಶ್ ಹಾಗೂ ಕ್ರೀಡಾ ವಿಭಾಗದಲ್ಲಿ ಪ್ರಕಾಶ್ ರಾಥೋಡ್ ಅವರನ್ನು ಪರಿಷತ್‍ಗೆ ನಾಮನಿರ್ದೇಶನ ಮಾಡಲಾಗಿದೆ.

ಜೆಡಿಎಸ್‍ಗೆ ಒಂದು ಸ್ಥಾನ ಮೀಸಲಿಡಲಾಗಿದ್ದು, ಆ ಹೆಸರು ಇನ್ನೂ ಅಂತಿಮಗೊಂಡಿಲ್ಲ. ನಾಮನಿರ್ದೇಶನಕ್ಕೆ ರಾಜ್ಯದಿಂದ ಕಳುಹಿಸಲಾಗಿದ್ದ ಕಾಂಗ್ರೆಸ್ ಪಟ್ಟಿಯಲ್ಲಿ ಮುಖ್ಯಮಂತ್ರಿ ಚಂದ್ರು ಸೇರಿ ಒಟ್ಟು ಆರು ಆಕಾಂಕ್ಷಿಗಳ ಹೆಸರು ಇತ್ತು. ಅಂತಿಮವಾಗಿ ವೆಂಕಟೇಶ್ ಹಾಗೂ ಪ್ರಕಾಶ್ ರಾಥೋಡ್ ವಿಧಾನ ಪರಿಷತ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ