ಪೊಲೀಸ್ ಸಾಹಿತಿ ರಘು ಬೆಟ್ಟಳ್ಳಿ ಅವರ ತಿರುವು ಕಾದಂಬರಿ ಲೋಕಾರ್ಪಣೆ

ಬೆಂಗಳೂರು, ಅ.30- ಮನುಷ್ಯನ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳು ಎದುರಾದಾಗ ಎದೆಗುಂದದೆ ಒಳಿತಿನ ಕಡೆಗೆ ಮಾತ್ರ ಮುನ್ನಡೆಬೇಕೆಂದು ಕವಿ ಡಾ.ಸಿದ್ದಲಿಂಗಯ್ಯ ತಿಳಿಸಿದ್ದಾರೆ.
ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಡಾ. ಸಿದ್ದಲಿಂಗಯ್ಯ ಪ್ರತಿಷ್ಠಾನ ಮತ್ತು ಬೆಂಗಳೂರು ನಗರ ಪೆÇೀಲಿಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪೆÇೀಲಿಸ್ ಸಾಹಿತಿ ರಘು ಬೆಟ್ಟಳ್ಳಿ ಅವರ ತಿರುವು ಕಾದಂಬರಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಲೇಖಕರು ಪೆÇಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರಣ ಪ್ರತಿನಿತ್ಯ ಭಿನ್ನ ಸ್ವಭಾವದ ಜನರು ಸಂಪರ್ಕಕ್ಕೆ ಬರುತ್ತಾರೆ. ನೂರಾರು ವಿಷಯಗಳನ್ನು ಆಲಿಸಿ ಅನುಭವದ ಮೂಸೆಯಲ್ಲಿ ಮೂಡಿಬಂದಿರುವ ತಿರುವು ಕಾದಂಬರಿ ಉತ್ತಮವಾಗಿದೆ.ವಾಸ್ತವ ಸಂಗತಿಗಳನ್ನು ತೆರೆದಿಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪೆÇೀಲಿ ಸಾಹಿತ್ಯ ರಚನೆಯಿಂದ ಪ್ರಯೋಜನವಿಲ್ಲ, ಯುವ ಸಾಹಿತಿಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕವಾಗುವಂತಹ ಬರವಣಿಗೆಯನ್ನು ರೂಢಿಸಿಕೊಳ್ಳಬೇಕೆಂದು ಈ ವೇಳೆ ಕಿವಿಮಾತು ಹೇಳಿದರು.

ಪೆÇೀಲಿಸ್ ಸೇವೆಯಂಥ ಗುರುತರ ಜವಾಬ್ದಾರಿಯ ನಡುವೆ ಒತ್ತಡವನ್ನು ನಿಭಾಯಿಸಲು ಸಾಹಿತ್ಯ ರಚನೆಯ ಪ್ರವೃತ್ತಿ ಉತ್ತಮ ಮಾರ್ಗೋಪಾಯ ಎಂದು ನಿರೂಪಿಸಿರುವ ರಘುಬೆಟ್ಟಳ್ಳಿ ಬದುಕು-ಭವಿಷ್ಯ ಉಜ್ವಲವಾಗಲಿ
ವಿಜಯನಗರ ಉಪವಿಭಾಗದ ಎಸಿಪಿ ಪರಮೇಶ್ವರ್ ಹೆಗಡೆ ಹಾರೈಸಿದರು.

ತಿರುವು ಕಾದಂಬರಿ ಓದಿನಿಂದ ಅಪರಾಧಿಗಳ ಮನ ಪರಿವರ್ತನೆಯಾಗಿ ಅಪರಾಧ ಕೃತ್ಯಗಳ ಸಂಖ್ಯೆ ಕಡಿಮೆಯಾದರೆ ಕಾದಂಬರಿ ರಚನೆಗೆ ಸಾರ್ಥಕತೆ ಲಭಿಸುತ್ತದೆ ಎಂದು ಲೇಖಕ ರಘು ಬೆಟ್ಟಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಮಾತನಾಡಿ, ತಿರುವು ಕಾದಂಬರಿ ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆ ಎಂದರು.ಉದ್ಯೋಗಸ್ಥರಾಗಿ ಸಾಹಿತ್ಯ ಸೇವೆ ಸಲ್ಲಿಸುತ್ತಿರುವುದು ಕನ್ನಡದ ಕೆಲಸವಾಗಿದ್ದು, ಇಂಥವರ ಸಂಖ್ಯೆ ದ್ವಿಗುಣಗೊಳ್ಳಲಿ ಎಂದು ಆಶಿಸಿದರು.

ಬಸವೇಶ್ವರನಗರ ಪೆÇಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸೋಮಶೇಖರ್, ಕೆಂಗೇರಿ ಗೇಟ್ ಎಸಿಪಿ ಮಂಜುನಾಥ್. ಪ್ರತಿಷ್ಠಾನದ ಉಪಾಧ್ಯಕ್ಷ ಹೊ.ಬೊ.ಪುಟ್ಟೆಗೌಡ, ಯುವ ಕವಿ ಮುದಲ್ ವಿಜಯ್, ಕಸಾಪ ಬೆಂಗಳೂರು ಘಟಕದ ಅಧ್ಯಕ್ಷ ಮಾಯಣ್ಣ ಮುಂತಾದವರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ